ಮಂಗಳವಾರ, ಆಗಸ್ಟ್ 16, 2022
29 °C

ಜನವರಿಯಲ್ಲಿ ಸೆಟ್ಟೇರಲಿದೆ 'ಬೆಲ್ ಬಟನ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಕಾರಣದಿಂದ ಒಂದಷ್ಟು ದಿನಗಳ ಕಾಲ ವಿರಾಮ ಪಡೆದಿದ್ದ ಚಿತ್ರರಂಗದಲ್ಲಿ ಪುನಃ ಚಟುವಟಿಕೆಗಳು ಆರಂಭವಾಗುತ್ತಿದೆ. ಹೊಸ ಹೊಸ ಚಿತ್ರಗಳು ಸೆಟ್ಟೇರಲು ಆರಂಭವಾಗಿವೆ.‌ ಈ ಪೈಕಿ 'ಬೆಲ್ ಬಟನ್' ನೂತನ ಚಿತ್ರ ಸಹ ಜನವರಿಯಲ್ಲಿ ಸೆಟೇರಲಿದೆ.

ಫ್ರೆಶ್ ಫಿಲಂಸ್ ಲಾಂಛನದಲ್ಲಿ ಹೇಮಂತ್ ಕುಮಾರ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ‌ನಲವತ್ತು ದಿನಗಳ ಕಾಲ ನಡೆಯಲಿದೆ.

ರಂಗಭೂಮಿ ಹಿನ್ನೆಲೆಯಿರುವ ಲಕ್ಷ್ಮೀನರಸಿಂಹ ಈ ಚಿತ್ರದ ನಿರ್ದೇಶಕರು. ಸಾಕಷ್ಟು ಚಿತ್ರಗಳಿಗೆ ಸಹ ನಿರ್ದೇಶನ ಮಾಡಿ ಅನುಭವವಿರುವ ಇವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಲವ್ ಹಾಗೂ ಫ್ಯಾಮಿಲಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಲಕ್ಷ್ಮೀನರಸಿಂಹ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ‌. ಮೂರು ಹಾಡುಗಳಿದ್ದು, ಪ್ರಶಾಂತ್ ಸಂಗೀತ ನೀಡುತ್ತಿದ್ದಾರೆ. ಎಂ. ಜೈ. ಛಾಯಾಗ್ರಹಣ ಹಾಗೂ ಹರೀಶ್ ಸಂಕಲನ ಈ ಚಿತ್ರಕ್ಕಿದೆ.

ಶಿವ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ರಾಧಿಕಾ ರಾವ್, ಅಚ್ಯುತ ಕುಮಾರ್, ವೇಣುಗೋಪಾಲ್, ಗಂಗರಾಜ್, ಮುತ್ತು, ನಾರಾಯಣ ಗೌಡ, ಯಾದವ್ ಮುಂತಾದವರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು