ಸೋಮವಾರ, ಆಗಸ್ಟ್ 8, 2022
25 °C
ನವೀನ ತಂತ್ರಜ್ಞಾನ

ಮತ್ತೆ ತೆರೆ ಮೇಲೆ ಡಾ.ರಾಜ್‌ಕುಮಾರ್‌ ಅಭಿನಯದ ‘ಭಾಗ್ಯವಂತರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭಾಗ್ಯವಂತರು’ ಸಿನಿಮಾ

ವರನಟ ಡಾ.ರಾಜ್‌ಕುಮಾರ್‌ ಹಾಗೂ ನಟಿ ಬಿ.ಸರೋಜಾದೇವಿ ಅವರು ನಟಿಸಿದ್ದ ‘ಭಾಗ್ಯವಂತರು’ ಸಿನಿಮಾ ಚಂದನವನದಲ್ಲಿ ಸೂಪರ್‌ಹಿಟ್‌ ಆಗಿತ್ತು. ಭಾರ್ಗವ ಅವರು ನಿರ್ದೇಶಿಸಿದ್ದ ಈ ಸಿನಿಮಾವನ್ನು, ದ್ವಾರಕೀಶ್‌ಚಿತ್ರ ಬ್ಯಾನರ್‌ನಡಿ ದ್ವಾರಕೀಶ್‌ ನಿರ್ಮಾಣ ಮಾಡಿದ್ದರು.

ಇದೀಗ, 45 ವರ್ಷಗಳ ಬಳಿಕ ನವೀನ ತಂತ್ರಜ್ಞಾನದೊಂದಿಗೆ ಈ ಚಿತ್ರವು ಮರುಬಿಡುಗಡೆಯಾಗುತ್ತಿದೆ. ಎಂ.ಮುನಿರಾಜು ಅವರು ಈ ಚಿತ್ರವನ್ನು ಮರುಬಿಡುಗಡೆ ಮಾಡುತ್ತಿದ್ದು, ಜುಲೈ 8ರಂದು ಚಿತ್ರವು ತರೆಕಾಣಲಿದೆ. 7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ತಂತ್ರಜ್ಞಾನವನ್ನು ಚಿತ್ರಕ್ಕೆ ಅಳವಡಿಸಲಾಗಿದೆ. ರಾಜ್ಯದಾದ್ಯಂತ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಮುನಿರಾಜು ತಿಳಿಸಿದ್ದಾರೆ.

ರಾಜ್‌ಕುಮಾರ್‌ ಅವರ ಅಪಟ್ಟ ಅಭಿಮಾನಿಯಾಗಿರುವ ಮುನಿರಾಜು, ಈ ಹಿಂದೆ ‘ಆಪರೇಷನ್ ಡೈಮೆಂಡ್ ರ್‍ಯಾಕೆಟ್‌’, ‘ನಾನೊಬ್ಬ ಕಳ್ಳ’, ‘ದಾರಿ ತಪ್ಪಿದ ಮಗ’ ಸೇರಿದಂತೆ ಕೆಲ ಚಿತ್ರಗಳನ್ನು ಈ ರೀತಿ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದರು. ಮುಂದೆ ‘ಹುಲಿಯ ಹಾಲಿನಮೇವು’ ಸೇರಿದಂತೆ ರಾಜ್‌ಕುಮಾರ್‌ ಅವರ ಮತ್ತಷ್ಟು ಚಿತ್ರಗಳನ್ನು ಹೊಸ ತಂತ್ರಜ್ಞಾನದೊಂದಿಗೆ
ಮರುಬಿಡುಗಡೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು