ಭಾನುವಾರ, ಅಕ್ಟೋಬರ್ 20, 2019
27 °C

ಅ. 18ಕ್ಕೆ ಥಿಯೇಟರ್‌ಗೆ ‘ಭರಾಟೆ’ ಲಗ್ಗೆ

Published:
Updated:
Prajavani

ಚೇತನ್‌ಕುಮಾರ್‌ ನಿರ್ದೇಶನದ ‘ರೋರಿಂಗ್‌ ಸ್ಟಾರ್‌’ ಶ್ರೀಮುರಳಿ ನಾಯಕನಾಗಿರುವ ‘ಭರಾಟೆ’ ಸಿನಿಮಾ ಅಕ್ಟೋಬರ್‌ 18ರಂದು ಥಿಯೇಟರ್‌ಗೆ ಲಗ್ಗೆ ಇಡಲಿದೆ.

ಈಗಾಗಲೇ, ಚಿತ್ರತಂಡ ಸಿನಿಮಾದ ಪ್ರಚಾರದಲ್ಲಿ ತೊಡಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಬಿಡುಗಡೆಗೊಂಡಿರುವ ಮೂರು ಸಾಂಗ್‌ಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ. ಇದಕ್ಕೂ ಮೊದಲು ಅಕ್ಟೋಬರ್‌ 13ರಂದು ಚಿತ್ರದ ಟ್ರೇಲರ್‌ ಬಿಡುಗಡೆಗೆ ಸಿದ್ಧತೆ ನಡೆಸಿದೆ.

‘ಉಗ್ರಂ’, ‘ರಥಾವರ’ ಮತ್ತು ‘ಮಫ್ತಿ’ ಚಿತ್ರದಲ್ಲಿ ಶ್ರೀಮುರಳಿ ರಗಡ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಅಂದಹಾಗೆ ‘ಮಫ್ತಿ’ ತೆರೆಕಂಡಿದ್ದು ಎರಡು ವರ್ಷದ ಹಿಂದೆ. ಹಾಗಾಗಿ, ‘ಭರಾಟೆ’ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. 

ಈ ಚಿತ್ರದಲ್ಲಿ ಕೌಟುಂಬಿಕ ಬಾಂಧವ್ಯದ ಸುತ್ತ ಕಥೆ ಹೊಸೆಯಲಾಗಿದೆ. ಮಕ್ಕಳು, ಯುವಜನರು ಕಳೆದುಕೊಳ್ಳುತ್ತಿರುವ ಬಾಂಧವ್ಯದ ಮಹತ್ವ ಕುರಿತು ಸಿನಿಮಾ ಮಾತನಾಡುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. 

ಶ್ರೀಲೀಲಾ ಈ ಚಿತ್ರದ ನಾಯಕಿ. ಸುಪ್ರೀತ್‌ ಆರ್ಥಿಕ ಇಂಧನ ಒದಗಿಸಿದ್ದಾರೆ. ಸಾಯಿಕುಮಾರ್‌, ರವಿಶಂಕರ್‌ ಮತ್ತು ಅಯ್ಯಪ್ಪ ಈ ಮೂವರು ಸಹೋದರರು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ರಚಿತಾ ರಾಮ್‌ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಗಿರೀಶ್‌ ಗೌಡ ಅವರ ಛಾಯಾಗ್ರಹಣವಿದೆ.

Post Comments (+)