ಭಾನುವಾರ, ಫೆಬ್ರವರಿ 5, 2023
21 °C

ಹಿಂದಿ ವೆಬ್‌ಸರಣಿಯಲ್ಲಿ ಭಾವನಾ ರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಗಾಳಿಪಟ’ ಸಿನಿಮಾ ಖ್ಯಾತಿಯ ಭಾವನಾ ರಾವ್‌ ಇದೀಗ ಬಿಟೌನ್‌ ದಿಗ್ಗಜರ ಜೊತೆ ತೆರೆಹಂಚಿಕೊಂಡಿದ್ದಾರೆ. ಹಿಂದಿಯ ವೆಬ್‌ಸರಣಿ ‘ಧಾರಾವಿ ಬ್ಯಾಂಕ್‌’ನಲ್ಲಿ ಭಾವನಾ ಬಣ್ಣಹಚ್ಚಿದ್ದು, ನ.19ರಂದು ಇದು ಬಿಡುಗಡೆಯಾಗಲಿದೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ ಜೊತೆ ಭಾವನಾ ಈ ವೆಬ್‌ಸರಣಿಯಲ್ಲಿ ಅಭಿನಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾವನಾ ಅವರು, ‘ಹಿಂದಿಯಲ್ಲಿ ಇದು ನನ್ನ ಮೊದಲ ವೆಬ್ ಸರಣಿ. ಇದರಲ್ಲಿ ಸುನೀಲ್ ಶೆಟ್ಟಿ ಮಗಳಾಗಿ ನಾನು ನಟಿಸಿದ್ದು, ಲಾಯರ್ ಪಾತ್ರವನ್ನು ನಿರ್ವಹಿಸಿದ್ದೇನೆ. ಸರಣಿಯಲ್ಲಿ ಒಟ್ಟು ಹತ್ತು ಸಂಚಿಕೆಗಳಿದ್ದು, ತುಂಬಾ ಚೆನ್ನಾಗಿ ಇದು ಮೂಡಿಬಂದಿದೆ’ ಎಂದಿದ್ದಾರೆ. ಕನ್ನಡದಲ್ಲಿ ಭಾವನಾ ನಟನೆಯ ‘ಹೊಂದಿಸಿ ಬರೆಯಿರಿ’, ‘ಗ್ರೇ ಗೇಮ್ಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇವುಗಳ ಜೊತೆ ಇನ್ನೂ ಮೂರ್ನಾಲ್ಕು ಸಿನಿಮಾಗಳು ಅವರ ಕೈಯಲ್ಲಿವೆ.

‘ಇಂದೋರಿ ಇಶ್ಕ್’, 'ಹಾಫ್ ಟಿಕೆಟ್’ ಸಿನಿಮಾ ಖ್ಯಾತಿಯ ಸಮಿತ್ ಕಕ್ಕಡ್ ‘ಧಾರಾವಿ ಬ್ಯಾಂಕ್’ ವೆಬ್ ಸರಣಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟರಾದ ಸುನೀಲ್ ಶೆಟ್ಟಿ ಹಾಗೂ ವಿವೇಕ್ ಒಬೆರಾಯ್ ನಟಿಸಿದ್ದಾರೆ. ಸರಣಿಯ ಟ್ರೈಲರ್‌ ಈಗಾಗಲೇ ಸದ್ದು ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನ.19ರಂದು ಎಂಎಕ್ಸ್‌ ಪ್ಲೇಯರ್‌ನಲ್ಲಿ ಇದು ಬಿಡುಗಡೆಯಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು