ಬಹುತೇಕ ಹೊಸಬರಿಂದಲೇ ಕೂಡಿರುವ ‘ಭರವಸೆ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತು. ‘ಪ್ರೀತ್ಸೋ ಹೃದಯಕ್ಕೆ’ ಎಂಬ ಅಡಿಬರಹ ಚಿತ್ರಕ್ಕಿದೆ. ಮುತ್ತು ಗಂಗೂರ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಶಿವಮೊಗ್ಗದ ಲಕ್ಷೀ ನಾಗರಾಜ್ ನಿರ್ಮಾಪಕರು.

‘ಅನಿವಾರ್ಯ ಕಾರಣಗಳಿಂದ ಚಿತ್ರ ತಡವಾಗಿದೆ. ಪ್ರೀತಿ, ಕ್ರೈಂ ಎಳೆ ಇದ್ದರೂ ಸಾಕಷ್ಟು ಭಾವನಾತ್ಮಕ ಸನ್ನಿವೇಶಗಳಿವೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕಿನಲ್ಲೊಂದು ಭರವಸೆಯನ್ನು ಇಟ್ಟುಕೊಂಡಿರುತ್ತಾನೆ. ಸೋತವನು ಗೆಲ್ಲುತ್ತಾನೆ. ಗೆದ್ದವನಿಗೆ ಇನ್ನೆನೋ ಸಾಧಿಸಬೇಕೆಂಬ ಹಪಾಹಪಿ ಇರುತ್ತದೆ. ಅಂಥ ಹುಡುಗರ ಕಥೆಯಿದು’ ಎಂದರು ನಿರ್ದೇಶಕರು.

ತಾರಾಗಣದಲ್ಲಿ ವಿನಯರಾಜ್, ಅಹಲ್ಯ ಸುರೇಶ್, ಹೊನ್ನವಳ್ಳಿ ಕೃಷ್ಣ, ಶೋಭರಾಜ್, ಮನಮೋಹನ್ ರೈ, ಕಿಲ್ಲರ್ವೆಂಕಟೇಶ್, ಕೆಂಪೆಗೌಡ ಮುಂತಾದವರು ನಟಿಸಿದ್ದಾರೆ.

ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ ಮೊದಲಾದೆಡೆ ಚಿತ್ರೀಕರಣ ನಡೆಸಲಾಗಿದೆ. ಶ್ರೀಹರ್ಷ ಕೊಗೋಡ್ ಸಂಗೀತ, ವೀನಸ್ ಮೂರ್ತಿ ಛಾಯಾಚಿತ್ರಗ್ರಹಣ, ಕುಮಾರ್.ಸಿ.ಹೆಚ್ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.