ಸ್ಯಾಂಡಲ್‌ವುಡ್‌ನಲ್ಲಿ ‘ದುನಿಯಾ’ ಚಿತ್ರದ ಮೂಲಕ ನಾಯಕ ನಟರಾಗಿ ತಮ್ಮ ಜರ್ನಿ ಪ್ರಾರಂಭಿಸಿದ ದುನಿಯಾ ವಿಜಯ್ ಅನೇಕ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ‘ಸಲಗ’ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಅವರು ನಿರ್ದೇಶಿಸಿದ ಎರಡನೇ ಚಿತ್ರ ‘ಭೀಮ’. ನಾಯಕ ಮತ್ತು ನಿರ್ದೇಶಕ ಎರಡೂ ಪಾತ್ರವನ್ನು ಈ ಚಿತ್ರದಲ್ಲಿ ನಿಭಾಯಿಸುತ್ತಿರುವ ದುನಿಯಾ ವಿಜಯ್ ಅವರು ‘ಪ್ರಜಾವಾಣಿ’ ಜತೆ ತಮ್ಮ ಚಿತ್ರದ ಕುರಿತು ಮಾತನಾಡಿದ್ದಾರೆ. ಜೊತೆಗೆ, ಚಂದನವನಕ್ಕೆ ಬರುವ ಯುವ ಪ್ರತಿಭೆಗಳಿಗೆ ಕಿವಿಮಾತನ್ನೂ ಹೇಳಿದ್ದಾರೆ.