ಶುಕ್ರವಾರ, ಜುಲೈ 1, 2022
27 °C

ಚರ್ಚ್‌ ಸ್ಟ್ರೀಟ್‌ನಲ್ಲಿ ಪೊಲೀಸರ ಜೊತೆ ದಿವ್ಯಾ ಸುರೇಶ್‌ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್‌ ಬಾಸ್‌ ರಿಯಾಲಿಟಿ ಶೋ ಸ್ಪರ್ಧಿ ದಿವ್ಯಾ ಸುರೇಶ್‌ ಅವರು 10 ಗಂಟೆಯ ನಂತರವೂ ಚರ್ಚ್‌ಸ್ಟ್ರೀಟ್‌ನಲ್ಲಿ ಓಡಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸ್‌ ಸಿಬ್ಬಂದಿಯೊಂದಿಗೇ ವಾಗ್ವಾದ ನಡೆಸಲು ಮುಂದಾದರು. ದೃಶ್ಯ ಮಾಧ್ಯಮದವರು ಇದನ್ನು ಸೆರೆಹಿಡಿಯಲು ಮುಂದಾದಾಗ ಅವರ ಸ್ನೇಹಿತ ಕ್ಯಾಮೆರಾ ಕಸಿದುಕೊಳ್ಳಲು ಪ್ರಯತ್ನಿಸಿದರು. ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದರು.

ಬಿಗ್ ಬಾಸ್ 8ರ ಮನೆಯಲ್ಲಿ ವಿನ್ನರ್ ಮಂಜು ಪಾವಗಡ ಅವರ ಜೊತೆಗಿನ ಒಡನಾಟ, ಜಗಳ, ಮುನಿಸು, ತಮಾಷೆ ಸನ್ನಿವೇಶಗಳ ಮೂಲಕ ಗಮನ ಸೆಳೆದಿದ್ದರು.   

ಮನೆಯ ಟಾಸ್ಕ್‌ಗಳಲ್ಲೂ ಕ್ರಿಯಾಶೀಲರಾಗಿದ್ದ ಅವರು, ಕೊನೆಯ ವಾರಗಳಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ ಟಾಪ್ 5ಗೆ ಬರುವಲ್ಲಿ ವಿಫಲರಾಗಿದ್ದರು. 

ಕೊರೊನಾ ರೂಪಾಂತರಿ ತಳಿ ಓಮೈಕ್ರಾನ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರ ನಿನ್ನೆ ರಾತ್ರಿಯಿಂದ 2022ರ ಜನವರಿ 7ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. 

ನಗರದ ವಿವಿಧೆಡೆ ‍ಪೊಲೀಸ್‌ ಸಿಬ್ಬಂದಿ ನಾಕಾಬಂದಿ ಹಾಕಿ ವಾಹನಗಳ ತಪಾಸಣೆ ನಡೆಸಿದರು. ರಾತ್ರಿ 9.30ಕ್ಕೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಹೊಯ್ಸಳ ಹಾಗೂ ಚೀತಾ ಸಿಬ್ಬಂದಿ 10 ಗಂಟೆಯೊಳಗೆ ಹೋಟೆಲ್‌, ಪಬ್‌ ಹಾಗೂ ರೆಸ್ಟೋರೆಂಟ್‌ಗಳ ಬಾಗಿಲು ಮುಚ್ಚುವಂತೆ ಸೂಚನೆ ನೀಡುತ್ತಿದ್ದರು. ಕೆಲವೆಡೆ, ಗಸ್ತಿನಲ್ಲಿದ್ದ ಸಿಬ್ಬಂದಿ 9.50ಕ್ಕೆ ಅಂಗಡಿಗಳ ಬಾಗಿಲು ಹಾಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು