ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಮಿತಾ ಶೆಟ್ಟಿ, ರಾಕೇಶ್‌ ಬಾಪಟ್‌ ಪ್ರೀತಿಯ ‘ಶರಾ‘ಗೆ ಪೂರ್ಣ ವಿರಾಮ!

ಅಕ್ಷರ ಗಾತ್ರ

ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಹಾಗೂ ರಾಕೇಶ್‌ ಬಾಪಟ್‌ ನಡುವಿನ ಸಂಬಂಧ ಬ್ರೇಕಪ್‌ ಆಗಿದೆ. ಈ ಬಗ್ಗೆ ಶಮಿತಾ ಶೆಟ್ಟಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು, ಶಮಿತಾ ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ. ಪ್ರೀತಿಗೆ ‘ಶರಾ‘ (ಇಲ್ಲಿ 'ಶ' ಎಂದರೆ ಶಮಿತಾ, ರಾ ಎಂದರೆ ರಾಕೇಶ್) ಬರೆದಿದ್ದ ಈ ಜೋಡಿಯು ತಮ್ಮ ಪ್ರೇಮ ಪರಿಣಯಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.

ಯಾವ ಕಾರಣಗಳಿಗೆಬ್ರೇಕಪ್ ಆಗಿದೆ ಎಂಬ ಮಾಹಿತಿಯನ್ನು ಶಮಿತಾ ಹೇಳಿಕೊಂಡಿಲ್ಲ. ನಾನು ರಾಕೇಶ್‌ ಜೊತೆಗಿಲ್ಲ, ಈ ವಿಷಯವನ್ನು ಹೇಳಿಕೊಳ್ಳುವುದು ಮುಖ್ಯವಾಗಿತ್ತು. ನಾವು ಕೆಲ ದಿನಗಳಿಂದ ದೂರ ಇದ್ದೇವೆ. ನಿಮ್ಮ ಬೆಂಬಲ, ಪ್ರೀತಿಹೀಗೆ ಮುಂದುವರೆಯಲಿ ಎಂದು ಶಮಿತಾ ಹೇಳಿದ್ದಾರೆ.

ಶಮಿತಾ ಹಾಗೂ ರಾಕೇಶ್‌ ಒಟಿಟಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳಾಗಿದ್ದರು. ಬಿಗ್‌ಬಾಸ್‌ ಮನೆಯಲ್ಲಿಇವರು ಪ್ರೀತಿಗೆ ಬಿದ್ದಿದ್ದರು. ಮನೆಯಲ್ಲಿ ತೀರ ಸಲುಗೆಯಿಂದ, ಆತ್ಮೀಯವಾಗಿ ಇರುತ್ತಿದ್ದರು. ಶಮಿತಾ ಮತ್ತು ರಾಕೇಶ್‌ ಮದುವೆಯಾಗುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಪರಸ್ಪರ ಇಬ್ಬರು ಬೇರೆ ಬೇರೆಯಾಗಿದ್ದಾರೆ.

44 ವರ್ಷದ ರಾಕೇಶ್ ಹಾಗೂ 43ರ ಹರೆಯದ ಶಮಿತಾ ಶೆಟ್ಟಿ ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT