ಸೋಮವಾರ, ಡಿಸೆಂಬರ್ 5, 2022
23 °C

ಬಿಹಾರದ ನ್ಯಾಯಾಲಯದಿಂದ ಏಕ್ತಾ ಕಪೂರ್, ತಾಯಿ ವಿರುದ್ಧ ಬಂಧನ ವಾರೆಂಟ್

ಪಿಟಿಐ Updated:

ಅಕ್ಷರ ಗಾತ್ರ : | |

ಬೆಗುಸರಾಯ್: ತಮ್ಮ ವೆಬ್ ಸರಣಿ 'XXX'(ಸೀಸನ್–2)ನಲ್ಲಿ ಸೈನಿಕರನ್ನು ಅವಮಾನಿಸಿದ ಮತ್ತು ಅವರ ಕುಟುಂಬ ಸದಸ್ಯರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕಿ ಮತ್ತು ನಿರ್ದೇಶಕಿ ಏಕ್ತಾ ಕಪೂರ್ ಹಾಗೂ ಅವರ ತಾಯಿ ಶೋಭಾ ಕಪೂರ್ ವಿರುದ್ಧ ಬಿಹಾರದ ಬೆಗುಸರಾಯ್ ನ್ಯಾಯಾಲಯ ಬುಧವಾರ ಬಂಧನ ವಾರೆಂಟ್ ಹೊರಡಿಸಿದೆ.

ಮಾಜಿ ಸೈನಿಕ ಮತ್ತು ಬೆಗುಸರಾಯ್ ನಿವಾಸಿ ಶಂಭು ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ನ್ಯಾಯಾಧೀಶ ವಿಕಾಸ್ ಕುಮಾರ್ ವಾರೆಂಟ್ ಹೊರಡಿಸಿದೆ.

2020ರಲ್ಲಿ ನೀಡಿದ್ದ ತಮ್ಮ ದೂರಿನಲ್ಲಿ ಕುಮಾರ್, 'XXX' (ಸೀಸನ್-2) ಸರಣಿಯು ಸೈನಿಕನ ಹೆಂಡತಿಗೆ ಸಂಬಂಧಿಸಿದ ಹಲವಾರು ಆಕ್ಷೇಪಾರ್ಹ ದೃಶ್ಯಗಳನ್ನು ಒಳಗೊಂಡಿದೆ ಎಂದು ಆರೋಪಿಸಿದ್ದರು.

‘ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್ ಒಡೆತನದ ಒಟಿಟಿ ಪ್ಲಾಟ್‌ಫಾರ್ಮ್ ಎಎಲ್‌ಟಿಬಾಲಾಜಿಯಲ್ಲಿ ಈ ಸರಣಿಯನ್ನು ಪ್ರಸಾರ ಮಾಡಲಾಗಿದೆ. ಶೋಭಾ ಕಪೂರ್ ಅವರು ಬಾಲಾಜಿ ಟೆಲಿಫಿಲ್ಮ್ಸ್ ಜೊತೆ ನಂಟು ಹೊಂದಿದ್ದಾರೆ’ಎಂದು ಕುಮಾರ್ ಅವರ ವಕೀಲ ಹೃಷಿಕೇಶ್ ಪಾಠಕ್ ಹೇಳಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾಗುವಂತೆ ನ್ಯಾಯಾಲಯವು ಅವರಿಗೆ (ಏಕ್ತಾ ಕಪೂರ್‌ ಮತ್ತು ಅವರ ತಾಯಿಗೆ) ಸಮನ್ಸ್ ಜಾರಿ ಮಾಡಿತ್ತು ಆದರೆ, ಆಕ್ಷೇಪಣೆಯ ನಂತರ ವೆಬ್ ಸರಣಿಯಲ್ಲಿನ ಕೆಲವು ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಏಕ್ತಾ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ, ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾರೆಂಟ್ ಹೊರಡಿಸಲಾಗಿದೆ’ಎಂದು ಪಾಠಕ್ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು