ಶಂಕರ್, ನೀವು ಬಹಳ ಬೇಗ ನಮ್ಮನ್ನು ಬಿಟ್ಟು ಹೋದಿರಿ: ನೀನಾ ಗುಪ್ತಾ

ಬೆಂಗಳೂರು: ಕನ್ನಡದ ಖ್ಯಾತ ನಟ ಶಂಕರ್‌ನಾಗ್ ಜತೆ ನಟಿಸಿದ್ದ ಉತ್ಸವ್ ಚಲನಚಿತ್ರದ ನೆನಪುಗಳನ್ನು ನಟಿ ನೀನಾ ಗುಪ್ತಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ರೇಖಾ, ಅಮ್ಜದ್ ಖಾನ್, ಅನುರಾಧಾ ಪಟೇಲ್ ಮತ್ತು ಶೇಖರ್ ಸುಮನ್ ತಾರಾಗಣ ಹೊಂದಿದ್ದ ಉತ್ಸವ್ ಚಲನಚಿತ್ರದ ಶೂಟಿಂಗ್ ಸಂದರ್ಭದ ಸೆಟ್‌ನಲ್ಲಿನ ಫೋಟೋ ಒಂದನ್ನು ನೀನಾ ಗುಪ್ತಾ ಪೋಸ್ಟ್ ಮಾಡಿದ್ದಾರೆ.
ಚಿತ್ರದ ಜತೆಗೆ, ಶಂಕರ್, ನೀವು ನಮ್ಮನ್ನು ಬಿಟ್ಟು ಬಹಳ ಬೇಗನೆ ಹೋಗಿಬಿಟ್ಟಿರಿ ಎಂದು ಅಡಿಬರಹ ನೀಡಿರುವ ನೀನಾ, 1984ರಲ್ಲಿ ಉತ್ಸವ್ ಚಿತ್ರದ ಸೆಟ್‌ನಲ್ಲಿ ಶಂಕರ್ ನಾಗ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ.
ಗಿರೀಶ್ ಕಾರ್ನಾಡ್ ನಿರ್ದೇಶನದ ಚಿತ್ರದಲ್ಲಿ, ನೀನಾ ಗುಪ್ತಾ ಹಾಗೂ ಶಂಕರ್ ನಾಗ್ ನಡುವೆ ಕೆಲವೊಂದು ಭಾವನಾತ್ಮಕ ಸನ್ನಿವೇಶದ ಚಿತ್ರಣಗಳಿದ್ದವು. ಆ ಚಿತ್ರದ ಚಿತ್ರೀಕರಣ ಬಳಿಕ ನಾವು ಮತ್ತಷ್ಟು ಹತ್ತಿರವಾಗಿದ್ದೆವು, ನಮ್ಮ ಗೆಳೆತನಕ್ಕೆ ಅದು ಉತ್ತಮ ಆರಂಭ ದೊರಕಿಸಿತು ಎಂದು ನೀನಾ ತಿಳಿಸಿದ್ದಾರೆ.
ಕಂಗನಾಳನ್ನು ಟ್ವಿಟರ್ನಲ್ಲಿ ಮಿಸ್ ಮಾಡಿಕೊಳ್ಳುತ್ತಿಲ್ಲ: ತಾಪ್ಸಿ ಪನ್ನು
ನಟ ಶಂಕರ್ ನಾಗ್, 1990ರಲ್ಲಿ ತಮ್ಮ 35ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.
Explainer: ಐಎಂಡಿಬಿ ಟಾಪ್ 250ರ ಪಟ್ಟಿಯಲ್ಲಿ ಇರೋದೇ ಕನ್ನಡದ ಎರಡು ಚಿತ್ರಗಳು!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.