ಬುಧವಾರ, ಸೆಪ್ಟೆಂಬರ್ 29, 2021
19 °C

ಸಿನಿಮಾ: ಸೀತಾವತಾರದಲ್ಲಿ ಕಂಗನಾ...

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ನಟಿ ಕಂಗನಾ ರನೌತ್‌ ಅವರು ‘ದಿ ಇನ್‌ಕಾರ್ನೇಶನ್‌ – ಸೀತಾ’ (ಸೀತಾವತಾರ)ದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ರಾಮಾಯಣ ಮಹಾಕಾವ್ಯದ ಪ್ರಸಂಗವೊಂದನ್ನು ಎತ್ತಿಕೊಂಡು ಈ ಚಿತ್ರ ನಿರ್ಮಿಸಲಾಗುತ್ತಿದೆ. ಎಸ್‌.ಎಸ್‌. ಸ್ಟುಡಿಯೋ ಬ್ಯಾನರ್‌ನಲ್ಲಿ ಸಲೋನಿ ಶರ್ಮಾ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಅಲೌಕಿಕ್‌ ದೇಸಾಯಿ ಈ ಚಿತ್ರದ ನಿರ್ದೇಶಕರು. ಕೆ.ವಿ. ವಿಜಯೀಂದ್ರ ಪ್ರಸಾದ್‌ ಚಿತ್ರಕಥೆ ಬರೆದಿದ್ದಾರೆ. ರನೌತ್‌ ಅವರ ತಲೈವಿ ಕಥೆ ಬರೆದವರೂ ವಿಜಯೀಂದ್ರ ಅವರೇ.

‘ಕಂಗನಾ ಅವರು ಭಾರತೀಯ ಮಹಿಳೆಯ ಚೀತನ್ಯ ಮತ್ತು ಸಾರವನ್ನು ಸಂಕೇತಿಸುತ್ತಾರೆ. ಭಯರಹಿತ, ಧೈರ್ಯಶಾಲಿ ವ್ಯಕ್ತಿತ್ವ ಅವರದ್ದು. ಹೀಗಾಗಿ ಎಲ್ಲ ಆಯಾಮಗಳಲ್ಲೂ ಸಮಾನತೆಯನ್ನು ಸಾಧಿಸಲು ಮುಂದಾಗಿದ್ದೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. 

ರನೌತ್‌ ಅವರು ‘ಧಾಕಡ್‌’ ಮತ್ತು ‘ತೇಜಸ್‌’ ಚಿತ್ರಗಳಲ್ಲಿಯೂ ತೊಡಗಿದ್ದಾರೆ. ಅವರು ಈ ಚಿತ್ರಗಳಲ್ಲಿ ವಾಯುಪಡೆಯ ಪೈಲಟ್‌ ಆಗಿ ಅಭಿನಯಿಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು