ಬುಧವಾರ, ಮೇ 18, 2022
25 °C

‘ಸರೋಜಿನಿ ನಾಯ್ಡು‘ ಬಯೋಪಿಕ್‌ ಚಿತ್ರಕ್ಕೆ ಕನ್ನಡಿಗ ವಿನಯ್‌ ಚಂದ್ರ ನಿರ್ದೇಶಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭಾರತದ ಕೋಗಿಲೆ‘ ಖ್ಯಾತಿಯ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಸಿನಿಮಾವನ್ನು ಕನ್ನಡಿಗ, ಸಂಗೀತ ನಿರ್ದೇಶಕ ವಿನಯ್ ಚಂದ್ರ ನಿರ್ದೇಶನ ಮಾಡುವ ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡುತ್ತಿದ್ದಾರೆ.

ಇದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದೆ. ತೆಲುಗು, ಹಿಂದಿ, ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಮಲಯಾಳಂ, ತಮಿಳು ಭಾಷೆಗಳಿಗೂ ಸಿನಿಮಾ ಡಬ್‌ ಆಗಲಿದೆ ಎಂದು ವರದಿಯಾಗಿದೆ. 

ಕೋಸ್ಟಲ್‌ವುಡ್‌ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಸೋನಲ್ ಮೊಂತೆರೋ, ಸರೋಜಿನಿ ನಾಯ್ಡು ಅವರು ಯುವತಿಯಾಗಿದ್ದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಶಾಂತಿ ಪ್ರಿಯಾ ಅವರು ಸರೋಜಿನಿ ನಾಯ್ಡು ಅವರು ಮಧ್ಯ ವಯಸ್ಕರಾಗಿದ್ದ ಹಾಗೂ ಹಿರಿಯರಾಗಿದ್ದ ಪಾತ್ರವನ್ನು ಮಾಡಲಿದ್ದಾರೆ. 

ಇದನ್ನೂ ಓದಿ: 

ಈಗಾಗಲೇ ಸಿನಿಮಾದ ಹೆಸರು ಹಾಗೂ ಫಸ್ಟ್‌ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಸರೋಜಿನಿ‘ ಎಂದು ಹೆಸರಿಡಲಾಗಿದೆ. ಸರೋಜಿನಿ ಸಿನಿಮಾದ ಚಿತ್ರೀಕರಣ ಜೂನ್‌ನಲ್ಲಿ ಆರಂಭವಾಗಲಿದ್ದು, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿ ಹಾಗೂ ಬೆಂಗಳೂರು, ಕೊಡಗಿನಲ್ಲೂ ಕೆಲವು ಪ್ರದೇಶಗಳಲ್ಲಿ ಶೂಟಿಂಗ್ ನಡೆಯಲಿದೆ ಚಿತ್ರತಂಡ ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು