ಸೋಮವಾರ, ಫೆಬ್ರವರಿ 24, 2020
19 °C

‘ಚಿಟ್ಟೆ’ಯ ಸೈಕಲ್‌ ಸವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನಟಿ ಪಾರುಲ್‌ ಯಾದವ್‌ ಅವರು ಕಬ್ಬನ್‌ ಪಾರ್ಕಿನಲ್ಲಿ ಬೆಳ್ಳಂಬೆಳಿಗ್ಗೆ ತಮ್ಮ ಮುದ್ದಿನ ಸಾಕು ನಾಯಿ ಪಮೊರಿಯನ್‌ ಕೂರಿಸಿಕೊಂಡು ಸೈಕಲ್‌ ಮೇಲೆ ಜಾಲಿ ರೈಡ್‌ ಮಾಡಿದ್ದಾರೆ.

ಕಪ್ಪು ಪ್ಯಾಂಟ್‌, ಪಟ್ಟೆಪಟ್ಟೆಯ ಕುರ್ತಾ ಧಾರಿಯಾಗಿ, ನೀಲಿ ಬಣ್ಣದ ಸೈಕಲ್‌ ಏರಿ ಟ್ರ್ಯಾಕ್‌ನಲ್ಲಿ ಸ್ವಚ್ಛಂದ ಸವಾರಿ ನಡೆಸುತ್ತಿದ್ದ ಪಾರುಲ್‌  ಅವರನ್ನು ಕಂಡಾಗ ವಾಯುವಿಹಾರಿಗಳಿಗೂ ಅಚ್ಚರಿ. ಕೆಲವರು ಬಿಟ್ಟಕಣ್ಣು ಬಿಟ್ಟಂತೆ ಬೆರಗಿನಿಂದ ಈ ಚೆಲುವೆಯನ್ನು ಕಣ್ತುಂಬಿಕೊಂಡರು. ಇನ್ನು ಕೆಲವರು ಯಾವುದೋ ಚಿತ್ರದ ಶೂಟಿಂಗ್‌ ನಡೆಯುತ್ತಿರಬಹುದೆಂದು ಕುತೂಹಲದಿಂದ ನಿಂತು ನೋಡುತ್ತಿದ್ದರು. 

ಜಾಲಿ ಮೂಡಿನಲ್ಲಿ, ಹಾಡು ಗುನುಗಿಕೊಂಡು ಸೈಕಲ್‌ ಸವಾರಿ ನಡೆಸಿರುವ 13 ಸೆಕೆಂಡ್‌ಗಳ ವಿಡಿಯೊ ಒಂದನ್ನು ಪಾರುಲ್‌ ತಮ್ಮ ಟ್ವಿಟರ್‌ ಖಾತೆಯಲ್ಲೂ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಈ ವಿಡಿಯೊಗೆ ‘ಈ ಕ್ಷಣಕ್ಕೆ ಸಂತೋಷವಾಗಿರಿ. ಈ ಕ್ಷಣ ನಿಮ್ಮ ಜೀವನ – ಉಮರ್ ಖಯ್ಯಾಮ್‌’ ರುಬಾಯತ್‌ ಒಂದನ್ನು ಅಡಿ ಟಿಪ್ಪಣಿ ನೀಡಿ ಗಮನ ಸೆಳೆದಿದ್ದಾರೆ.

ಹಿಂದಿಯ ‘ಕ್ವೀನ್‌’ ಚಿತ್ರದ ಕನ್ನಡ ರೂಪ ‘ಬಟರ್‌ಫ್ಲೈ’ ಚಿತ್ರದಲ್ಲಿ ಪಾರುಲ್ ಗೋಕರ್ಣದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ನಟ ರಮೇಶ್ ಅರವಿಂದ್ ಅವರ ನಿರ್ದೇಶನದಲ್ಲಿ ಈ ಚಿತ್ರ ಕನ್ನಡ ಸೇರಿ ನಾಲ್ಕು ಭಾಷೆಗಳಲ್ಲಿ ಸಿದ್ಧವಾಗಿದೆ. ಇದು ಪಾತರಗಿತ್ತಿಯಂತೆ ಸ್ವಚ್ಛಂದವಾಗಿ ಹಾರಲು ಬಯಸುವ ಹೆಣ್ಣಿನ ಕಥೆಯ ಚಿತ್ರ. ಹಿಂದಿಯಲ್ಲಿ ಕಂಗನಾ ರನೋಟ್ ನಿಭಾಯಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ನಿಭಾಯಿಸಿದ್ದಾರಂತೆ. ಪಾರುಲ್ ಕನ್ನಡದಲ್ಲಿ ಈವರೆಗೆ ಇಂಥ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು