ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸಾಲೆ ಇಲ್ಲದ ಸಿನಿಮಾವನ್ನು ಜನ ಒಪ್ಪಿಕೊಳ್ಳುವರೇ: ನಿರ್ದೇಶಕ ಸುರೇಶ್ ಲಿಯೋನ್ ಆತಂಕ

Last Updated 31 ಅಕ್ಟೋಬರ್ 2019, 11:05 IST
ಅಕ್ಷರ ಗಾತ್ರ

‘ಈ ಸಿನಿಮಾದಲ್ಲಿ ಮಸಾಲೆ ಇಲ್ಲ. ಹಾಗಾಗಿ, ಜನರು ಒಪ್ಪಿಕೊಳ್ಳುತ್ತಾರೆಯೇ ಎಂಬುದು ನನಗೆ ಗೊತ್ತಿಲ್ಲ’ ಎಂದು ಆತಂಕದಿಂದಲೇ ಮಾತು ಆರಂಭಿಸಿದರು ‘C++’ ಚಿತ್ರದ ನಿರ್ದೇಶಕ ಸುರೇಶ್‌ ಲಿಯೋನ್‌ ರೇ. ಅವರ ಈ ಆತಂಕಕ್ಕೆ ಕಾರಣವೂ ಇತ್ತು.

ಇದೇ ಶುಕ್ರವಾರ ಸಿನಿಮಾ ತೆರೆ ಕಾಣುತ್ತಿದ್ದು, ಇದರ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡದ ಸಮೇತ ಅವರು ಹಾಜರಾಗಿದ್ದರು. ನಿರ್ದೇಶನದ ಜೊತೆಗೆ, ನಾಯಕ ನಟನಾಗಿಯೂ ಅವರು ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದು ಅವರ ಮೊದಲ ಚಿತ್ರ.

‘ಪ್ರಯೋಗಾತ್ಮಕ ಚಿತ್ರ ಇದು. ಒಂದೂ ಹಾಡಿಲ್ಲ. ನಾಯಕಿಯೂ ಇಲ್ಲ. ಹಾಗಾಗಿ, ಪ್ರೇಕ್ಷಕರು ಇಷ್ಟಪಡುತ್ತಾರೆಯೇ ಎಂಬ ಭಯ ಕಾಡುತ್ತಿದೆ. ಆದರೆ, ಚಿತ್ರದ ಕಂಟೆಂಟ್‌ ತಂತ್ರಜ್ಞಾನದ ಬಗ್ಗೆ ಆಸಕ್ತಿ ಇರುವವರಿಗೆ ಇಷ್ಟವಾಗಲಿದೆ. ಸಿನಿಮಾ ಇಷ್ಟವಾಗದಿದ್ದರೆ ಜನರಿಗೆ ಟಿಕೆಟ್‌ನ ಹಣವನ್ನೂ ವಾಪಸ್‌ ನೀಡುತ್ತೇನೆ’ ಎಂದು ವಿವರಿಸಿದರು.

‘ಸೈಬರ್‌ ಕ್ರೈಮ್‌ ಕಥನ ಇದಾಗಿದೆ. ಡಿಜಿಟಲ್‌ ಜಗತ್ತಿನಲ್ಲಿ ನಮಗೆ ಗೊತ್ತಿಲ್ಲದಂತಹ ಹಲವು ಘಟನೆಗಳು ಜರುಗುತ್ತಿವೆ. ಅದನ್ನು ಚಿತ್ರದಲ್ಲಿ ಹೇಳಿದ್ದೇನೆ. ಟೆಕ್ನಾಲಜಿಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಸೀಟಿನ ತುದಿಯಲ್ಲಿ ನೋಡುಗರನ್ನು ಕೂರಿಸುವ ಶಕ್ತಿ ಈ ಚಿತ್ರಕ್ಕಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಟಿಫ್ಲೆಕ್ಸ್‌ಗಳಲ್ಲಿ ಮಾತ್ರ ಈ ವಾರದ ಸಿನಿಮಾ ಬಿಡುಗಡೆಗೆ ಅವರು ನಿರ್ಧರಿಸಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದರೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದು ಅವರ ಇರಾದೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT