ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿಪ್‌ಕಾರ್ಟ್‌ ಜಾಹೀರಾತು: ನಟ ಅಮಿತಾಬ್ ಬಚ್ಚನ್ ವಿರುದ್ಧ ಸಿಎಐಟಿ ದೂರು

ಅಮಿತಾಬ್ ಅವರಿಗೆ ಕನಿಷ್ಠ ₹10 ಲಕ್ಷ ದಂಡ ವಿಧಿಸಬೇಕು ಎಂದು ದೂರಿನಲ್ಲಿ ಸಿಎಐಟಿ ಮನವಿ ಮಾಡಿದೆ
Published 4 ಅಕ್ಟೋಬರ್ 2023, 8:20 IST
Last Updated 4 ಅಕ್ಟೋಬರ್ 2023, 8:20 IST
ಅಕ್ಷರ ಗಾತ್ರ

ಬೆಂಗಳೂರು: ಫ್ಲಿಪ್‌ಕಾರ್ಟ್‌ 'ಬಿಗ್ ಬಿಲಿಯನ್ ಡೇಸ್ ಸೇಲ್‌' ಮಾರಾಟ ಅಭಿಯಾನದ ಜಾಹೀರಾತಿನಲ್ಲಿ ನಟ ಅಮಿತಾಬ್ ಬಚ್ಚನ್ ಅವರು ಗ್ರಾಹಕರನ್ನು ತಪ್ಪು ದಾರಿಗೆ ಎಳೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಗ್ರಾಹಕ ನ್ಯಾಯಾಲಯಕ್ಕೆ (CCPA) ವ್ಯಾಪಾರಸ್ಥರ ಸಂಘಟನೆ ಸಿಎಐಟಿ ದೂರು ನೀಡಿದೆ.

‘ಇಂತಹ ಆಫರ್ ನಿಮಗೆ ರಿಟೇಲ್ ಮಳಿಗೆಯಲ್ಲಿ ಸಿಗುವುದಿಲ್ಲ, ತ್ವರೆ ಮಾಡಿ’ ಎಂದು ಜಾಹೀರಾತಿನಲ್ಲಿ ಅಮಿತಾಬ್ ಹೇಳಿದ್ದಾರೆ. ಆದರೆ ಇದು ಸುಳ್ಳು, ಇದರಿಂದ ಸಣ್ಣ ವ್ಯಾಪಾರಸ್ಥರಿಗೆ ದೊಡ್ಡ ಹೊಡೆತ ಬೀಳುತ್ತದೆ. ಈ ಜಾಹೀರಾತು ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಸಿಎಐಟಿ ದೂರಿದೆ.

ಫ್ಲಿಪ್‌ಕಾರ್ಟ್‌ ಕಂಪನಿ ಮೇಲೂ ದೊಡ್ಡ ಮೊತ್ತದ ದಂಡ ವಿಧಿಸಬೇಕು, ಅಮಿತಾಬ್ ಅವರಿಗೆ ಕನಿಷ್ಠ ₹10 ಲಕ್ಷ ದಂಡ ವಿಧಿಸಬೇಕು ಎಂದು ದೂರಿನಲ್ಲಿ ಸಿಎಐಟಿ ಮನವಿ ಮಾಡಿದೆ. ಆದರೆ, ಈ ದೂರಿಗೆ ಅಮಿತಾಬ್ ವಕ್ತಾರರು ಹಾಗೂ ಫ್ಲಿಪ್‌ಕಾರ್ಟ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫ್ಲಿಪ್‌ಕಾರ್ಟ್‌ ನಲ್ಲಿ ಅಕ್ಟೋಬರ್ 8 ರಿಂದ ಅಕ್ಟೋಬರ್ 15ರವರೆಗೆ ಬಿಗ್ ಬಿಲಿಯನ್ ಡೇಸ್‌ ಸೇಲ್ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT