ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿರಾಟ್‌ ಮ್ಯಾಮ್‌‘ ಅಂತ ಕರೆಯಿರಿ; ಫೋಟೊಗ್ರಾಫರ್‌ ಕಾಲೆಳೆದ ಕೊಹ್ಲಿ

Published 11 ಮೇ 2023, 4:49 IST
Last Updated 11 ಮೇ 2023, 4:49 IST
ಅಕ್ಷರ ಗಾತ್ರ

ಫೋಟೊ ಕ್ಲಿಕ್ಕಿಸುವ ವೇಳೆ ಅನುಷ್ಕಾ ಶರ್ಮಾ ಅವರನ್ನು ಫೋಟೊಗ್ರಾಫರ್‌ ಒಬ್ಬರು ‘ಅನುಷ್ಕಾ ಸರ್‌‘ ಎಂದು ಕರೆದಿದ್ದು, ನನ್ನನ್ನು 'ವಿರಾಟ್‌ ಮ್ಯಾಮ್‌' ಅಂತ ಕರೆಯಿರಿ ಎಂದು ವಿರಾಟ್‌ ಕೊಹ್ಲಿ ಫೋಟೊಗ್ರಾಫರ್‌ ಕಾಲೆಳೆದಿದ್ದಾರೆ.

ಬುಧವಾರ ಮುಂಬೈನ ರೆಸ್ಟೋರೆಂಟ್‌ವೊಂದಕ್ಕೆ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭೇಟಿ ನೀಡಿದ್ದರು. ಈ ವೇಳೆ ಫೋಟೊಗೆ ಪೋಸ್‌ ಕೊಡುವಂತೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೆ ಫೋಟೊಗ್ರಾಫರ್‌ಗಳು ಒತ್ತಾಯಿಸಿದ್ದರು.

‍ಫೋಟೋ ತೆಗೆದುಕೊಳ್ಳುತ್ತಿರುವ ವೇಳೆ ಫೋಟೊಗ್ರಾಫರ್‌ ಒಬ್ಬರು ಬಾಯ್ತಪ್ಪಿ ಅನುಷ್ಕಾ ಶರ್ಮಾ ಅವರನ್ನು ‘ಅನುಷ್ಕಾ ಸರ್‌‘ ಎಂದು ಕರೆದಿದ್ದರು. ಇದನ್ನು ಕೇಳಿದ ವಿರಾಟ್‌ ಕೊಹ್ಲಿ ಬಿದ್ದು ಬಿದ್ದು ನಕ್ಕಿದ್ದಾರೆ. ನನ್ನನ್ನು 'ವಿರಾಟ್‌ ಮ್ಯಾಮ್‌' ಅಂತ ಕರೆಯಿರಿ ಎಂದು ಫೋಟೊಗ್ರಾಫರ್‌ ಅವರನ್ನೇ ಕಿಚಾಯಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿರಾಟ್‌ ಅವರ ಹ್ಯೂಮರ್ ಸೆನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT