ಭಾನುವಾರ, ಸೆಪ್ಟೆಂಬರ್ 19, 2021
30 °C

ಕಾನ್ ಚಿತ್ರೋತ್ಸವದತ್ತ ಹುಮಾ ಖುರೇಷಿ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೇ 14ರಿಂದ 25 ರವರೆಗೆ ನಡೆಯಲಿರುವ 72ನೇ ಕಾನ್ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಬಾರಿಯೂ ನಟಿ ಹುಮಾ ಖುರೇಷಿ ಪಾಲ್ಗೊಳ್ಳಲಿದ್ದಾರೆ.  ಸಿನಿಮೋತ್ಸವದಲ್ಲಿ ಭಾಗವಹಿಸುವ ಕುರಿತು ಕಾತರದಿಂದ ಕಾಯುತ್ತಿರುವ ಹುಮಾ, ಅದನ್ನು ಸಂಭ್ರಮಿಸುವ ಮೂಡಿನಲ್ಲಿದ್ದಾರೆ. ಎರಡನೇ ಬಾರಿ ಕಾನ್ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ ಹುಮಾ.

ಕಳೆದ ವರ್ಷ ಚಿತ್ರೋತ್ಸವದ ರೆಡ್‌ ಕಾರ್ಪೆಟ್‌ನಲ್ಲಿ ಪ್ಯಾಂಟ್ ಸೂಟ್‌ನಲ್ಲಿ ಗಮನ ಸೆಳೆದಿದ್ದ ಹುಮಾ, ಈ ಬಾರಿ ಯಾವ ರೀತಿಯ ಉಡುಗೆ ಧರಿಸಲಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.‘ಕಳೆದ ವರ್ಷ ಕಾನ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿತ್ತು. ವರ್ಷಗಳಿಂದ ಭಾರತೀಯ ಸಿನಿರಂಗ ಈ ಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಸ್ಥಾನ ಗಳಿಸುತ್ತಿದೆ. ಈ ಬಾರಿ ನಾನು ಮತ್ತೊಮ್ಮೆ ಬ್ರಾಂಡ್ ರಾಯಭಾರಿಯಾಗಿ ಪಾಲ್ಗೊಳ್ಳುತ್ತಿರುವ ಬಗ್ಗೆ ಥ್ರಿಲ್ ಅನಿಸುತ್ತಿದೆ’ ಎಂದು ಹುಮಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.  ‘ಗ್ಯಾಂಗ್ ಆಫ್ ವಾಸಿಂಪುರ್’ ‘ಡೇಡ್ ಇಷ್ಕಿಯಾ’ ಸಿನಿಮಾಗಳಲ್ಲಿ ತಮ್ಮ ನಟನೆಯಿಂದ ಹುಮಾ ಪ್ರೇಕ್ಷಕರ ಗಮನ ಸೆಳೆದಿದ್ದರು. ಸದ್ಯಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ವೆಬ್‌ ಸರಣಿಯೊಂದರಲ್ಲಿ ಹುಮಾ ನಟಿಸುತ್ತಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.