ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನಮ್ಮದು: ‘ಪ್ರಾಣ ಕೊಡೋಕೆ ಸಿದ್ಧ’ –ಮೋದಿಗೆ ಪತ್ರ ಬರೆದ ನಟ ಪ್ರೇಮ್

Published 1 ಅಕ್ಟೋಬರ್ 2023, 14:50 IST
Last Updated 1 ಅಕ್ಟೋಬರ್ 2023, 14:50 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತರು ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ವಿವಿಧ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಚಿತ್ರರಂಗದ ಗಣ್ಯರು ಬೆಂಬಲ ಸೂಚಿಸಿದ್ದಾರೆ.

ಕಾವೇರಿ ಹೋರಾಟದ ಕುರಿತು ‘ನೆನಪಿರಲಿ’ ಪ್ರೇಮ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಹೌದು, ಸಾಮಾಜಿಕ ಮಾಧ್ಯಮದಲ್ಲಿ ರಕ್ತದಲ್ಲಿ ಪತ್ರ ಬರೆದಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

‘ಕಾವೇರಿ, ಕರ್ನಾಟಕಕ್ಕೆ ದಯವಿಟ್ಟು ನ್ಯಾಯ ಕೊಡಿ. ಕಾವೇರಿ ನಮ್ಮದು’ ಎಂದು ಅವರು ರಕ್ತದಲ್ಲಿ ಪತ್ರ ಬರೆದಿದ್ದು, ‘ಸಿದ್ಧ ಕಣೋ ಪ್ರಾಣ ಕೊಡೋಕೆ, ಈ ಜಲ ನೆಲ ನಾಡು ನುಡಿಗೆ’ ಎಂದು ಬರೆದುಕೊಂಡಿದ್ದು, ಹಸ್ತದ ಅಚ್ಚನ್ನು ರಕ್ತದಲ್ಲಿ ನಮೂದಿಸಿದ್ದಾರೆ.

ಕಾಲೆಳೆದ ನೆಟ್ಟಿಗರು: ಕಾವೇರಿ ಹೋರಾಟ ಬೆಂಬಲ ಸೂಚಿಸಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್‌ ಹಂಚಿಕೊಳ್ಳುತ್ತದ್ದಂತೆ ನೆಟ್ಟಿಗರು ಪ್ರೇಮ್ ಅವರನ್ನು ಕಾಲೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT