ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಮಪದಂ’ ಚಿತ್ರಕ್ಕೆ ಯು ಪ್ರಮಾಣಪತ್ರ ಇಲ್ಲ

Last Updated 25 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ನಟಿ ತ್ರಿಷಾ ಕೃಷ್ಣನ್‌ ಅವರು ನಟಿಸಿರುವ ಥ್ರಿಲ್ಲರ್‌ ಚಿತ್ರ ‘ಪರಮಪದಂ’ ಚಿತ್ರಕ್ಕೆ ಸೆನ್ಸಾರ್‌ ಬೋರ್ಡ್‌ ‘ಯು’ ಪ್ರಮಾಣಪತ್ರ ನೀಡಲು ನಿರಾಕರಿಸಿದೆ.

ಈ ಚಿತ್ರವನ್ನು ಕೆ. ತಿರುಗುಣಮ್‌ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಈ ಚಿತ್ರವನ್ನು ಪ್ರಮಾಣಪತ್ರಕ್ಕಾಗಿ ಮಂಡಳಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಕೆಲವು ವಿವಾದಾತ್ಮಕ ದೃಶ್ಯಗಳಿಂದಾಗಿ ಚಿತ್ರಕ್ಕೆ ಯು ಪ್ರಮಾಣಪತ್ರ ನೀಡಲು ಮಂಡಳಿ ನಿರಾಕರಿಸಿದೆ. ಈ ಚಿತ್ರ ಸೆಟ್ಟೇರಿದ ದಿನದಿಂದಲೂ ಕೆಲವೊಂದು ಕಾರಣಗಳಿಂದ ಸುದ್ದಿಯಲ್ಲಿತ್ತು.

ಆದರೆ ಮರುಮೌಲ್ಯಮಾಪನಕ್ಕೆ ಸಿನಿಮಾವನ್ನು ಚಿತ್ರತಂಡ ಕಳುಹಿಸುತ್ತಿಲ್ಲ. ಅಕ್ಟೋಬರ್‌ ತಿಂಗಳಲ್ಲಿ ಈ ಸಿನಿಮಾವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರದಲ್ಲಿ ಮನಸ್ವಿ, ವೇಳಾ ರಾಮಮೂರ್ತಿ ಅವರೂ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT