ಮಂಗಳವಾರ, ಡಿಸೆಂಬರ್ 10, 2019
20 °C

ದರ್ಶನ್ ಅಭಿನಯದ ‘ಒಡೆಯ’ ಸಿನಿಮಾ ಡಿಸೆಂಬರ್‌ 12ಕ್ಕೆ ರಿಲೀಸ್‌

Published:
Updated:

ಎಂ.ಡಿ. ಶ್ರೀಧರ್‌ ನಿರ್ದೇಶನದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ನಟನೆಯ ‘ಒಡೆಯ’ ಸಿನಿಮಾ ಡಿಸೆಂಬರ್‌ 12ರಂದು ಬಿಡುಗಡೆಯಾಗಲಿದೆ. 

ಡಿಸೆಂಬರ್‌ 20ರಂದು ಪ್ರಭುದೇವ ನಟನೆಯ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಕಿಚ್ಚ ಸುದೀಪ್‌ ನಟನೆಯ ಹಿಂದಿಯ ‘ದಬಾಂಗ್‌ 3’ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ದಿನದಂದು ‘ಒಡೆಯ’ ಕೂಡ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಸುದೀಪ್‌ ಮತ್ತು ದರ್ಶನ್‌ ನಟನೆಯ ಈ ಚಿತ್ರಗಳ ನಡುವೆ ಕ್ಲಾಷ್‌ ಆಗಲಿದೆ ಎಂಬ ಆತಂಕ ಅಭಿಮಾನಿಗಳಿಗೆ ಕಾಡಿತ್ತು. ಈಗ ಒಂದು ವಾರ ಮೊದಲೇ ಥಿಯೇಟರ್‌ಗೆ ಬರಲು ‘ಒಡೆಯ’ ಚಿತ್ರತಂಡ ನಿರ್ಧರಿಸಿದೆ.

ಡಿಸೆಂಬರ್‌ 1ರಂದು ‘ಒಡೆಯ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ಇದು ತಮಿಳಿನ ‘ವೀರಂ’ ಚಿತ್ರದ ರಿಮೇಕ್‌. ಇದರಲ್ಲಿ ಐವರು ಸಹೋದರರ ಪ್ರೀತಿಯ ಅಣ್ಣನ ಕಥೆ ಹೊಸೆಯಾಗಲಿದೆ. ಸನ ತಿಮ್ಮಯ್ಯ ಈ ಚಿತ್ರದ ನಾಯಕಿ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಎನ್‌. ಸಂದೇಶ್‌ ಬಂಡವಾಳ ಹೂಡಿದ್ದಾರೆ. ಎ.ವಿ. ಕೃಷ್ಣಕುಮಾರ್‌ (ಕೆ.ಕೆ.) ಅವರ ಛಾಯಾಗ್ರಹಣವಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು