ಶುಕ್ರವಾರ, ಮೇ 29, 2020
27 °C

ಕನ್ನಡ ಸಿನಿಮಾ ಚೆಕ್‌ಮೇಟ್‌ ಕಥಾನಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆಸ್‌ ಪ್ರಿಯರಿಗೆ ‘ಚೆಕ್‌ಮೇಟ್‌’ ಪದದ ಪರಿಚಯ ಇದ್ದೇ ಇರುತ್ತದೆ. ಈಗ ಗಾಂಧಿನಗರದಲ್ಲಿ ‘ದ ಚೆಕ್‌ಮೇಟ್‌’ ಹೆಸರಿನ ಸಿನಿಮಾ ನಿರ್ಮಾಣವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇದಕ್ಕೆ ಭಾರತೀಶ ವಸಿಷ್ಠ ಹಾಗೂ ಸಂತೋಷ್ ಚಿಪ್ಪಾಡಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.  

ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದು. ಲವ್‌ಸ್ಟೋರಿ, ಕಾಮಿಡಿಯೂ ಇದೆ. ನಾಲ್ವರು ಸ್ನೇಹಿತರು ಬ್ರೇಕಪ್‌ ಪಾರ್ಟಿಗೆ ಹೋಗುತ್ತಾರೆ. ಎಲ್ಲರೂ ಚದುರಂಗದಾಟದ ಬಲೆಗೆ ಸಿಲುಕಿಕೊಳ್ಳುತ್ತಾರೆ. ಅವರ ನಡುವೆಯೇ ಆಟ ಶುರುವಾಗುತ್ತದೆ. ಇದರ ಪರಿಣಾಮ ಸ್ನೇಹ ಮರೆಯಾಗಿ ಸ್ವಾರ್ಥ ಹೆಡೆ ಎತ್ತುತ್ತದೆ. ಈ ಬಲೆಯಿಂದ ಅವರೆಲ್ಲರೂ ಹೇಗೆ ಹೊರಗೆ ಬರುತ್ತಾರೆ ಎಂಬುದೇ ಈ ಚಿತ್ರದ ಕಥಾಹಂದರ.

ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ಜಗಜ್ಯೋತಿ ಮೂವಿ ಮೇಕರ್ಸ್. ಇತ್ತೀಚೆಗೆ ಚಿತ್ರದ ಒಂದು ಹಾಡನ್ನು ಆನಂದ್ ಆಡಿಯೊದ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

‘ತಿರುಗಿ ತಿರುಗಿ ನೋಡು ಒಮ್ಮೆ ನನ್ನನ್ನು...’ ಎಂಬ ಈ ಹಾಡನ್ನು ಭಾರತೀಶ ವಸಿಷ್ಠ ಬರೆದಿದ್ದಾರೆ. ಶಶಾಂಕ್ ಶೇಷಗಿರಿ ಇದಕ್ಕೆ ಧ್ವನಿಯಾಗಿದ್ದಾರೆ. ಚಿತ್ರದ ಮತ್ತೊಂದು ಥೀಮ್‌ ಗೀತೆಯನ್ನೂ ಅವರೇ ಹಾಡಿದ್ದಾರಂತೆ.

ಐವತ್ತೆಂಟು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸವೂ ಪೂರ್ಣಗೊಂಡಿದ್ದು, ಪ್ರಾದೇಶಿಕ ಚಲನಚಿತ್ರ ಮಂಡಳಿಯ ಮುಂದೆ ಸಿನಿಮಾ ಹೋಗಿದೆಯಂತೆ. ಲಾಕ್‌ಡೌನ್‌ ಮುಗಿದ ಬಳಿಕ ಜನರ ಮುಂದೆ ಬರುವ ಯೋಚನೆ ಚಿತ್ರತಂಡದ್ದು.

ಸತೀಶ್ ರಾಜೇಂದ್ರನ್‌ ಅವರ ಛಾಯಾಗ್ರಹಣವಿದೆ. ಸಂಕಲನ ಎಸ್. ಈಶ್ವರ್ ಅವರದ್ದು. ವೈಲೆಂಟ್ ವೇಲು ಅವರ ಸಾಹಸ ನಿರ್ದೇಶನವಿದೆ. ಪ್ರಮೋದ್ ಅವರ ಕಲಾ ನಿರ್ದೇಶನವಿದೆ.

‘ಪಾರು ಐ ಲವ್‌ ಯು’ ಚಿತ್ರದ ನಾಯಕರಾಗಿದ್ದ ರಂಜನ್ ಹಾಸನ್ ಅವರೇ ಈ ಚಿತ್ರದ ನಾಯಕ. ಅವರಿಗೆ ಪ್ರೀತು ಪೂಜಾ ನಾಯಕಿ. ಸರ್ದಾರ್ ಸತ್ಯ, ರಾಜಶೇಖರ್, ವಿಜಯ್ ಚೆಂಡೂರ್, ನೀನಾಸಂ ಅಶ್ವಥ್, ‘ಕಾಕ್ರೋಚ್’ ಸುಧಿ, ವಿಶ್ವ ವಿಜೇತ್, ಪ್ರದೀಪ್ ಪೂಜಾರಿ, ಹರಿ ಕಾರ್ತಿಕ್, ಕಿಲ್ಲರ್ ಮಂಜ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.