ಶುಕ್ರವಾರ, ಆಗಸ್ಟ್ 19, 2022
22 °C

ಆನಂದ್‌ ಎಲ್‌. ರಾಯ್‌ ನಿರ್ದೇಶನದಲ್ಲಿ ವಿಶ್ವನಾಥನ್ ಆನಂದ್ ಜೀವನಚರಿತ್ರೆಯ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ಖ್ಯಾತ ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್ ಅವರ ಜೀವನಚರಿತ್ರೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ ನಿರ್ದೇಶಕ ಆನಂದ್ ಎಲ್‌. ರಾಯ್‌. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಕಲರ್ ಎಲ್ಲೊ ಪ್ರೊಡಕ್ಷನ್ ಹಾಗೂ ಸನ್‌ಡಯಲ್ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ನಿರ್ಮಾಣದ ಹೊಣೆ ಹೊತ್ತಿದೆ.

ಈ ಸುದ್ದಿಯ ಕುರಿತು ಟ್ರೇಡ್ ಅನಾಲಿಸ್ಟ್ ತಾರನ್ ಆದರ್ಶ್‌ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರ ಜೀವನಚರಿತ್ರೆಯನ್ನು ಸಿನಿಮಾ ಮಾಡಲಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರು ಅಂತಿಮವಾಗಿಲ್ಲ. ಸಿನಿಮಾವನ್ನು ಆನಂದ್ ಎಲ್‌. ರಾಯ್‌ ನಿರ್ದೇಶನ ಮಾಡುತ್ತಿದ್ದಾರೆ. ಸನ್‌ಡಯಲ್ ಎಂಟರ್‌ಟೈನ್‌ಮೆಂಟ್ ಹಾಗೂ ಕಲರ್ ಎಲ್ಲೊ ಪ್ರೊಡಕ್ಷನ್ ನಿರ್ಮಾಣದ ಹೊಣೆ ಹೊತ್ತಿದೆ’ ಎಂದು ಬರೆದುಕೊಂಡಿದ್ದಾರೆ. ‌

 

 

 

ಈ ಸಿನಿಮಾದ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಸಿನಿಮಾ ತಂಡ ಹಾಗೂ ಇತರ ವಿಷಯಗಳ ಕುರಿತು ಮಾತುಕಥೆ ನಡೆಯುತ್ತಿದೆ.

 

ಆನಂದ್‌ ರಾಯ್‌ ಸದ್ಯ ಅಕ್ಷಯ್ ಕುಮಾರ್, ಧನುಷ್‌ ಹಾಗೂ ಸಾರಾ ಅಲಿ ಖಾನ್ ನಟನೆಯ ‘ಅಟಂಗ್ರಿ ರೇ’ ಸಿನಿಮಾವನನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹಿಮಾಂಶು ಶರ್ಮಾ ಚಿತ್ರಕಥೆ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು