ಬುಧವಾರ, ಜನವರಿ 29, 2020
30 °C

‘ಛಪಾಕ್‘ ಟ್ರೇಲರ್ ಬಿಡುಗಡೆ ವೇಳೆ ಕಣ್ಣೀರಾದ ದೀಪಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಛಪಾಕ್ ಸಿನಿಮಾದ ದೃಶ್ಯ ಒಂದರಲ್ಲಿ ದೀಪಿಕಾ ಪಡುಕೋಣೆ

ನವದೆಹಲಿ: ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್‌ ಅವರ ಬದುಕಿನ ಕಥೆ ಆಧಾರಿತ ‘ಛಪಾಕ್’ ಸಿನಿಮಾದ ಟ್ರೇಲರ್ ಬಿಡುಗಡೆ ವೇಳೆ ಗುಳಿಕೆನ್ನೆಯ ಬೆಡಗಿ ದೀಪಿಕಾ ಪಡುಕೋಣೆ ಕಣ್ಣೀರಾದರು.  

ಸಹ ನಟ ವಿಕ್ರಾಂತ್ ಮಸ್ಸೆ ಮತ್ತು ನಿರ್ದೇಶಕಿ ಮೇಘಾ ಗುಲ್ಜಾರ್ ಅವರೊಂದಿಗೆ ಮುಂಬೈನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದೀಪಿಕಾ ಪಡುಕೋಣೆ ಚಿತ್ರದ ಕುರಿತು ಮಾತನಾಡುವ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ದೀಪಿಕಾ ಭಾವುಕರಾಗಿರುವ ಫೋಟೊ ಮತ್ತು ವಿಡಿಯೊ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

ಛಪಾಕ್ ಚಿತ್ರದಲ್ಲಿ ದೀಪಿಕಾ ನಟಿಸಿರುವ ಪಾತ್ರದ ಹೆಸರು ಮಾಲತಿ. ಆ್ಯಸಿಡ್ ದಾಳಿಗೆ ತುತ್ತಾಗಿ ಬುದುಕುಳಿದ ನಂತರದ ಪ್ರಯಾಣವನ್ನು ಚಿತ್ರಿಸಲಾಗಿದೆ. ಅಪರಾಧಗಳ ವಿರುದ್ಧದ ಹೋರಾಟ ಮತ್ತು ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯರ ಪರವಾಗಿ ನಿಲ್ಲುವ ಮಾಲತಿಯ ಛಲವನ್ನು ಟ್ರೇಲರ್‌ ಬಿಂಬಿಸುತ್ತಿದೆ. 

ಈ ಮೊದಲು ಚಿತ್ರದ ಫಸ್ಟ್‌ಲುಕ್‌ನಲ್ಲಿಯೇ ದೀಪಿಕಾ, ಲಕ್ಷ್ಮಿ ಅಗರ್‌ವಾಲ್‌ ಅವರಂತೆಯೇ ಗೋಚರಿಸುತ್ತಿದ್ದದ್ದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. 

ಇದನ್ನೂ ಓದಿ: ದೀಪಿಕಾ ಪಡುಕೋಣೆ ಅಭಿನಯದ ‘ಛಪಾಕ್’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ

ಇನ್ನುಳಿದಂತೆ ಚಿತ್ರದಲ್ಲಿ ವಿಕ್ರಾಂತ್ ಮಸ್ಸೆ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ನಿಜ ಜೀವನದಲ್ಲಿ ಲಕ್ಷ್ಮಿ ಅಗರ್‌ವಾಲ್ ಅವರ ಪರ ನಿಂತು ನ್ಯಾಯಕ್ಕಾಗಿ ಹೋರಾಡುವ ಪತಿ ಅಮೊಲ್ ದೀಕ್ಷಿತ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

 
 
 
 

 
 
 
 
 
 
 
 
 

A very emotional #DeepikaPadukone and #meghnagulzar at movie #chhapaak trailer launch #instadaily #ManavManglani

A post shared by Manav Manglani (@manav.manglani) on

‘ರಾಝಿ’ಯಂಥ ಯಶಸ್ವಿ ಸಿನಿಮಾ ಕೊಟ್ಟ ನಿರ್ದೇಶಕಿ ಮೇಘನಾ ಗುಲ್ಜಾರ್ ನಿರ್ದೇಶಿಸಿರುವ ಚಿತ್ರಕ್ಕೆ ದೀಪಿಕಾ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರವು ಮುಂದಿನ ವರ್ಷ ಜನವರಿ 10ಕ್ಕೆ ತೆರೆಕಾಣಲಿದೆ.

ಇದನ್ನೂ ಓದಿ: ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು