ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಛವಿ ಮಿತ್ತಲ್'ಗೆ ಸ್ತನ ಕ್ಯಾನ್ಸರ್‌: ಮಕ್ಕಳಿಗೆ ಹಾಲುಣಿಸಿದ್ದನ್ನು ನೆನೆದ ನಟಿ...

Last Updated 17 ಏಪ್ರಿಲ್ 2022, 7:58 IST
ಅಕ್ಷರ ಗಾತ್ರ

ಬಾಲಿವುಡ್ ಹಾಗೂ ಹಿಂದಿ ಕಿರುತೆರೆಯ ಜನಪ್ರಿಯ ನಟಿಛವಿ ಮಿತ್ತಲ್ (Chhavi Mittal) ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಡಿಯರ್‌ ಬ್ರೆಸ್ಟ್ಸ್‌... ಎಂಬ ಸಾಲುಗಳಿಂದ ಅವರು ಬರೆದಿರುವ ಪತ್ರ ಆರಂಭವಾಗುತ್ತದೆ. ‘ನನಗೆ ಮೊದಲ ಸಲ ಈ ಆನಂದವನ್ನು ನೀಡಿದಾಗ ನಿನ್ನ ಮ್ಯಾಜಿಕ್ಏನು ಎಂಬುದು ಗೊತ್ತಾಯಿತು. ಆದರೆ ನಿನ್ನ ಮಹತ್ವ ಅರಿವಾಗಿದ್ದು ಮಕ್ಕಳಿಗೆ ಹಾಲುಣಿಸುವಾಗ. ಈಗ ನೀನು ಕ್ಯಾನ್ಸರ್‌ನೊಂದಿಗೆಸೆಣೆಸುತ್ತಿರುವಾಗ ನಿನ್ನ ಪರವಾಗಿ ನಿಲ್ಲಬೇಕಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಆದರೆ ಇದರಿಂದ ನನ್ನ ಆತ್ಮವಿಶ್ವಾಸ ಕಡಿಮೆಯಾಗುವುದಿಲ್ಲ. ನಾನು ಮೊದಲಿನಂತೆ ಆಗದಿರಬಹುದು ಆದರೆ ಇದರಿಂದ ನನ್ನ ಯೋಚನೆಗಳಿಗೆ ತೊಂದರೆಯಾಗುವುದಿಲ್ಲ‘ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಈಗಾಗಲೇ ಕ್ಯಾನ್ಸರ್‌ನಿಂದ ಗುಣಮುಖರಾಗಿ ಆರೋಗ್ಯಯುತವಾಗಿ ಜೀವನ ನಡೆಸುತ್ತಿರುವವರನ್ನು ಉದ್ದೇಶಿಸಿಯೂ ಅವರು ಬರೆದುಕೊಂಡಿದ್ದಾರೆ. ಕ್ಯಾನ್ಸರ್‌ನಿಂದ ಗೆದ್ದು ಬಂದವರಿಂದ ನಿತ್ಯವೂ ಪ್ರೇರಣೆ ಪಡೆಯುತ್ತಿರುವುದಾಗಿ ಅವರು ಹೇಳಿದ್ದಾರೆ. ಪತ್ರದ ಕೊನೆಯಲ್ಲಿ ಇಂತಹ ಪರಿಸ್ಥಿತಿಯಲ್ಲಿ ನನ್ನ ಜೊತೆ ನಿಂತ ಆಪ್ತರು, ಸ್ನೇಹಿತರು, ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಛವಿ ಧನ್ಯವಾದ ತಿಳಿಸಿದ್ದಾರೆ.

ಈ ಪರಿಸ್ಥಿತಿಯನ್ನು ಗೆದ್ದು ಬರುವುದಾಗಿ ಎಂದುಛವಿ ಮಿತ್ತಲ್ ವಿಶ್ವಾಸದಿಂದ ಹೇಳಿದ್ದಾರೆ.

ಈಗಾಗಲೇ ಸಿನಿಮಾರಂಗ, ಕ್ರೀಡೆ ಸೇರಿದಂತೆ ವಿವಿಧವಲಯಗಳಲ್ಲಿನ ಹಲವರುಕ್ಯಾನ್ಸರ್ನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ಆರೋಗ್ಯಯುತವಾದ ಜೀವನ ನಡೆಸುತ್ತಿದ್ದಾರೆ.

ಛವಿ ಮಿತ್ತಲ್ ಅವರ ಅನಾರೋಗ್ಯದ ಪೋಸ್ಟ್ ಅಭಿಮಾನಿಗಳಿಗೆ ಶಾಕ್ ತಂದಿರುವುದು ಸುಳ್ಳಲ್ಲ. ಚೇತರಿಸಿಕೊಂಡು ಮತ್ತೆ ಮೊದಲಿನಂತೆ ನಟನೆಗೆ ಮರಳಿ ಎಂದು ಅಭಿಮಾನಿಗಳು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಹಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT