ನವದೆಹಲಿ (ಪಿಟಿಐ): 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತದ ಸೇನಾ ಪಡೆಗಳ ನಡುವೆ ನಡೆದ ಸಂಘರ್ಷದ ಕಥೆ ಆಧರಿಸಿ ನಟ ಸಲ್ಮಾನ್ ಖಾನ್ ನಟನೆಯ ‘ಬ್ಯಾಟಲ್ ಆಫ್ ಗಾಲ್ವಾನ್’ ಸಿನಿಮಾದ ಕುರಿತು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ಇದಕ್ಕೆ ತಿರುಗೇಟು ನೀಡಿರುವ ಭಾರತ, ‘ಸಿನಿಮಾಗಳು ಕಲಾತ್ಮಕ ಅಭಿವ್ಯಕ್ತಿಯಾಗಿದ್ದು, ಅದರ ಮೇಲೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದೆ.

ಭಾರಿ ಬಜೆಟ್ನ ಸಿನಿಮಾ ನಿರ್ಮಾಣಕ್ಕೆ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 1.12 ನಿಮಿಷದ ಟೀಸರ್ ಉತ್ಪ್ರೇಕ್ಷೆಯಿಂದ ಕೂಡಿದ್ದು, ನೈಜ ಅಂಶಗಳನ್ನು ತಿರುಚಲಾಗಿದೆ ಎಂದು ತಿಳಿಸಿದೆ.

ಸಿನಿಮಾವನ್ನು ಅಪೂರ್ವ ಲಖಿಯಾ ಅವರು ನಿರ್ದೇಶನ ಮಾಡುತ್ತಿದ್ದು, ನಟ ಸಲ್ಮಾನ್ ಅವರು ‘ಬಿಕ್ಕುಮಲ್ಲಾ’ ಪಾತ್ರ ನಿರ್ವಹಿಸುತ್ತಿದ್ದಾರೆ. 2020ರಲ್ಲಿ ನಡೆದ ಚೀನಾದ ಜೊತೆಗಿನ ಸಂಘರ್ಷದಲ್ಲಿ 16ನೇ ಬಿಹಾರ್ ರೆಜಿಮೆಂಟ್ನ ಕರ್ನಲ್ ಬಿಕ್ಕುಮುಲ್ಲಾ ಸಂತೋಷ್ ಬಾಬು ಸೇರಿದಂತೆ 19 ಮಂದಿ ಮೃತಪಟ್ಟಿದ್ದರು. ಬಾಬು ಅವರಿಗೆ ಮರಣೋತ್ತರವಾಗಿ ‘ಮಹಾವೀರ ಚಕ್ರ’ ಗೌರವ ನೀಡಲಾಗಿತ್ತು.

ಸಲ್ಮಾನ್ ಖಾನ್ ಅವರ 60ನೇ ವರ್ಷದ ಜನ್ಮ ದಿನದ ಅಂಗವಾಗಿ ಶನಿವಾರ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಭಾರತದ ಸೇನಾಧಿಕಾರಿ ಹಾಗೂ ಸೈನಿಕರು ಚೀನಾ ಪಡೆಗಳ ಮೇಲೆ ದಾಳಿ ಸಿದ್ಧವಾಗಿರುವುದನ್ನು ತೋರಿಸಲಾಗಿದ್ದು, ‘ಮೇರಾ ಭಾರತ್ ದೇಶ ಮಹಾನ್ ಹೈ’ ಎಂಬ ಹಾಡು ಬಳಸಲಾಗಿದೆ.

‘ಸೈನಿಕರೇ ನೆನಪಿಡಿ, ನಿಮಗೆ ನೋವಾದರೆ, ಪದಕದಂತೆ ಗೌರವಿಸಿ, ನಿಮಗೆ ಸಾವು ಕಂಡರೆ, ಅದಕ್ಕೆ ಸೆಲ್ಯೂಟ್ ಮಾಡಿ’ ಎಂದು ಸಲ್ಮಾನ್ ಅವರ ಧ್ವನಿಯಲ್ಲಿ ತಿಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಟೀಸರ್ ಅನ್ನು 6 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಇದೇ ಏಪ್ರಿಲ್ 17ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.