ಶನಿವಾರ, ಡಿಸೆಂಬರ್ 4, 2021
23 °C

ಮತ್ತೆ ತೆರೆಯ ಮೇಲೆ ಮೇಘನಾ, ಹೊಸ ಚಿತ್ರದಲ್ಲಿ ನಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿರಂಜೀವಿ ಸರ್ಜಾ ಆವರ ಪತ್ನಿ ಮೇಘನಾರಾಜ್‌ ಮತ್ತೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಪತಿ ಚಿರು ನಿಧನರಾದದ್ದು, ಮಗನ ಲಾಲನೆ ಪಾಲನೆ ಕಾರಣಗಳಿಂದ ಕೆಲಕಾಲ ಚಿತ್ರ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಇತ್ತೀಚೆಗೆ ಹೊಸ ಚಿತ್ರದಲ್ಲಿ ನಟಿಸುವ ಬಗ್ಗೆ ಘೋಷಿಸಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ

ಪಿ.ಬಿ.ಸ್ಟುಡಿಯೋಸ್ ಲಾಂಛನದ ಅಡಿ ಪನ್ನಗಾಭರಣ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ.

‘ಕಮಲೇಶ್‌ ಸಹ ನಿರ್ಮಾಪಕರು. ವಿಶಾಲ್‌ ಆತ್ರೇಯ ಅವರ ನಿರ್ದೇಶನವಿದೆ. ಇದು ವಿಶಾಲ್‌ ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರ. ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ. ವರ್ಷಾಂತ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಇಂದು ಚಿರು ಹುಟ್ಟುಹಬ್ಬದ ಪ್ರಯುಕ್ತ ಚಾಲನೆ ನೀಡಿದ್ದೇವೆ’ ಎಂದರು ಪನ್ನಗಾಭರಣ.

‘ಚಿತ್ರ ನಿರ್ಮಾಣ ಚಿರು ಕನಸು. ಅದು ಈಗ ನನಸಾಗುತ್ತಿದೆ. ಇದು ಅವರ ಹುಟ್ಟುಹಬ್ಬಕ್ಕೆ ಉಡುಗೊರೆ ಎನ್ನಬಹುದು. ‌ಎಲ್ಲೋ ಅವರೆ ನಿಂತು ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಅನಿಸುತ್ತಿದೆ’ ಎಂದು ಮೇಘನಾರಾಜ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು