ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಚಿರು'ಗೆ 67ನೇ ವರ್ಷದ ಜನ್ಮದಿನ ಸಂಭ್ರಮ: ‘ಗಾಡ್‌ಫಾದರ್‌‘ ಟೀಸರ್‌ ಬಿಡುಗಡೆ 

Last Updated 22 ಆಗಸ್ಟ್ 2022, 7:16 IST
ಅಕ್ಷರ ಗಾತ್ರ

ತೆಲುಗಿನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಇಂದು (ಆ.22) 67ನೇ ವರ್ಷದ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.

ತಮ್ಮ ನಿವಾಸದಲ್ಲಿ ಪುತ್ರ ರಾಮ್‌ಚರಣ್‌, ಪುತ್ರಿ ಹಾಗೂ ಪತ್ನಿಯ ಸಮ್ಮುಖದಲ್ಲಿ ಸರಳವಾಗಿ ಕೇಕ್ ಕಟ್‌ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.

ತೆಲುಗು ಚಿತ್ರರಂಗದ ಗಣ್ಯರು ಸೇರಿದಂತೆ ದಕ್ಷಿಣ ಭಾರತದ ನಟ ನಟಿಯರು ಹಾಗೂ ಬಾಲಿವುಡ್‌ ತಾರೆಯರು ಚಿರುಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಚಿರು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಚಿರು ಈ ವರ್ಷ ಮೂರು ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಾಲ್ಟರ್‌ ವೀರಯ್ಯ, ಭೋಳ ಶಂಕರ್‌ ಹಾಗೂ ಗಾಡ್‌ಫಾದರ್ ಸಿನಿಮಾಗಳಲ್ಲಿ ಚಿರು ನಾಯಕರಾಗಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಗಾಡ್‌ಫಾದರ್‌ ಸಿನಿಮಾದ ಟೀಸರ್‌ ಬಿಡುಗಡೆ ಮಾಡಲಾಗಿದೆ.

ಈ ಟೀಸರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 70 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಇದು ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್. ಈ ಸಿನಿಮಾ ಮೇಲೆ ಚಿರಂಜೀವಿ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT