ಮಣಿರಾವ್ ಅವರ ಕಾದಂಬರಿ ಆಧರಿತ ಚಿತ್ರ ‘ಚೌಕಾಬಾರ’. ಮಾರ್ಚ್ 10ರಂದು ತೆರೆ ಕಾಣಲು ಸಜ್ಜಾಗಿದೆ. ರಾಜ್ಯದಾದ್ಯಂತ ಐವತ್ತಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ಸಕ್ರಿಯರಾಗಿರುವ ನಮಿತಾರಾವ್ ಹಾಗೂ ವಿಕ್ರಮ್ ಸೂರಿ ದಂಪತಿಯ ಕನಸೇ ಈ ಚಿತ್ರ. ನಮಿತಾರಾವ್ ಈ ಚಿತ್ರದ ನಾಯಕಿ. ವಿಹಾನ್ ಪ್ರಭಂಜನ್ ನಾಯಕ. ಕಾವ್ಯ ರಮೇಶ್, ಸುಜಯ್ ಹೆಗಡೆ, ಸಂಜಯ್ ಸೂರಿ, ಪ್ರಥಮ ಪ್ರಸಾದ್ ತಾರಾಗಣದಲ್ಲಿದ್ದಾರೆ.
ಮಾರ್ಚ್ 24, 25 ಹಾಗೂ 26 ಅಮೇರಿಕದ ಐದು ರಾಜ್ಯಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. ರೂಪಾ ಪ್ರಭಾಕರ್ ಸಂಭಾಷಣೆ ಬರೆದಿದ್ದಾರೆ. ಅಶ್ವಿನ್ ಪಿ. ಕುಮಾರ್ ಸಂಗೀತ ಸಂಯೋಜನೆ, ರವಿರಾಜ್ ಛಾಯಾಗ್ರಹಣ ಶಶಿಧರ್ ಸಂಕಲನ ಹಾಗೂ ಮದನ್- ಹರಿಣಿ, ಸಚಿನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.