ಸಿನಿಮಾ ಒಟಿಟಿ ವೇದಿಕೆಗಳು ಸಾಕಷ್ಟು ಇವೆ. ಆದರೆ, ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ ‘ಸಿನಿಬಜಾರ್’ ಒಟಿಟಿ.
ಸಾಮಾನ್ಯವಾಗಿ ಇತರ ಒಟಿಟಿಗಳಲ್ಲಿ ವಾರ್ಷಿಕ/ ಮಾಸಿಕ ಚಂದಾ ಪಾವತಿಸಿ ಚಿತ್ರ ಅಥವಾ ವಿಡಿಯೋ ಕಂಟೆಂಟ್ ನೋಡಬಹುದು. ಈ ವೇದಿಕೆಯಲ್ಲಿ ಹಾಗಲ್ಲ. ಒಮ್ಮೆ ನೋಂದಾಯಿಸಿದರೆ ಸಾಕು. ನೀವು ನೋಡಬೇಕಾದ ಚಿತ್ರಕ್ಕಷ್ಟೇ ನಿರ್ದಿಷ್ಟ ಮೊತ್ತ ಪಾವತಿಸಿ ನೋಡಬಹುದು. ಚಂದಾದಾರಿಕೆ ಅಥವಾ ಜಾಹೀರಾತು ಇಲ್ಲದ ಒಟಿಟಿ ಎಂದು ಹೇಳಿದೆ ಸಿನಿಬಜಾರ್ ತಂಡ.
ಈ ವೇದಿಕೆ ವಿಶ್ವದ 177 ದೇಶಗಳಲ್ಲಿ ಲಭಿಸಲಿದೆ. ಟಿವಿ. ಮೊಬೈಲ್, ವೆಬ್‌ಸೈಟ್ ಮೂಲಕವೂ ಸಿನಿಬಜಾರ್ ವಿಡಿಯೋ ಕಂಟೆಂಟ್‌ಗಳನ್ನು ನೋಡಬಹುದು.
ಡಾ.ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಭಾಗ್ಯವಂತರು’ ಚಿತ್ರ ಈ ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ಚಿತ್ರ. ‘ಪಂಪ’, ‘ಕಾಕ್ಟೈಲ್’, ‘ಗುರ್ಬಿ’ ಚಿತ್ರಗಳೂ ಸರಣಿಯಲ್ಲಿ ಬಿಡುಗಡೆಯಾಗಿವೆ. ಭಾಸ್ಕರ ವೆಂಕಟೇಶ್ ಅವರು ಸಿನಿಬಜಾರ್‌ನ ಮುಖ್ಯಸ್ಥರು. ಇತ್ತೀಚೆಗೆ ನಡೆದ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ. ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.