ಸುದೀಪ್ರಾಜ್ ಪ್ರೊಡಕ್ಷನ್ಸ್ ಲಾಂಛನದಡಿ ನಿರ್ಮಾಪಕ ಶ್ರೀರಾಜಶೇಖರ್.ಜಿ., ಎಂ.ರಾಮಕೃಷ್ಣಯ್ಯ ನಿರ್ಮಿಸುತ್ತಿರುವ ‘ಹಳ್ಳಿ ಹೈಕ್ಳ ಪ್ಯಾಟೇ ಲೈಫು’ ಹಳ್ಳಿ ಸೊಗಡಿನ ಸಂಪೂರ್ಣ ಹಾಸ್ಯಮಯ ಚಿತ್ರದ ಹತ್ತು ದಿವಸಗಳ ಪ್ರಥಮ ಹಂತದ ಚಿತ್ರೀಕರಣವು ಈಚೆಗೆ ರಾಮನಗರದಲ್ಲಿ ಮುಕ್ತಾಯಗೊಂಡಿತು. ‘ಈಗಷ್ಟೇ ಸಿನಿಮಾದ ಮೊದಲ ಹಂದ ಚಿತ್ರೀಕರಣ ಪೂರ್ಣಗೊಳಿಸಿ ಬಂದಿದ್ದೇವೆ. ದ್ವಿತೀಯ ಹಂತದ ಚಿತ್ರೀಕರಣವು ಡಿಸೆಂಬರ್ ಅಂತ್ಯದಲ್ಲಿ ಆರಂಭವಾಗಲಿದೆ’ ಎಂದು ನಿರ್ಮಾಪಕ ರಾಜಶೇಖರ್ ತಿಳಿಸಿದ್ದಾರೆ.
ಚಿತ್ರಕ್ಕೆ ರಾಜಶೇಖರ್ ಕಥೆ, ನಾಗರಾಜ್ ಛಾಯಾಗ್ರಹಣ, ಯುಗಾಂತ್ ಸಂಗೀತ, ವೈ.ಎಸ್. ಸುರೇಶ್ ಕೃಷ್ಣ ಜಿ.ರಾವ್ ಸಂಭಾಷಣೆ, ರಮೇಶ್ ಕಲೆ, ಸಂಜೀತ್ ರೆಡ್ಡಿ ಸಂಕಲನ, ರಾಜ್ದೇವ್, ಚಂದ್ರಿಕ ನೃತ್ಯ, ಕೆ. ಬಾಲು, ಪುನೀತ್ ಸಾಹಸವಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನು ಮಂಜು ಗಂಗಾವತಿ ಹೊತ್ತಿದ್ದಾರೆ.