ಸೋಮವಾರ, ಜೂನ್ 27, 2022
25 °C

ಗೆಳತಿ ಆನ್ಯಾ ರಂಗಸ್ವಾಮಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ದಾನಿಶ್ ಸೇಠ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟನೆ ಮತ್ತು ವಿಶಿಷ್ಟ ನಿರೂಪಣೆ ಮೂಲಕ ಕನ್ನಡಿಗರ ಮನಗೆದ್ದಿರುವ ಸ್ಟ್ಯಾಂಡ್‌ ಅಫ್‌ ಕಾಮಿಡಿಯನ್‌ ದಾನಿಶ್ ಸೇಠ್‌ ತಮ್ಮ ಬಹುಕಾಲದ ಗೆಳತಿ ಆನ್ಯಾ ರಂಗಸ್ವಾಮಿ ಅವರನ್ನು ಬುಧವಾರ ಮದುವೆಯಾಗಿದ್ದಾರೆ.

ದಾನಿಶ್, ರಿಜಿಸ್ಟರ್ ಮ್ಯಾರೇಜ್ ಆಗಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಆನ್ಯಾ ರಂಗಸ್ವಾಮಿ ಅವರನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದರು.

‘ಆನ್ಯಾ ತನ್ನ ಜೀವನವನ್ನು ನನ್ನ ಜೊತೆ ಕಳೆಯಲು ಸಮ್ಮತಿ ನೀಡಿದ್ದಾರೆ, ಇದರಿಂದ ನನಗೆ ತುಂಬಾ ಸಂತಸವಾಗಿದೆ. ಅವರಿಗೆ ನನ್ನ ಧನ್ಯವಾದಗಳು‘ಎಂದಿದ್ದಾರೆ.‘ಬುಧವಾರ (ಜೂನ್‌.9) ನಮ್ಮ ಕುಟುಂಬದ ಹತ್ತಿರದವರ ಸಮ್ಮುಖದಲ್ಲಿ ಅನ್ಯಾ ಮತ್ತು ನಾನು ಉಂಗುರ ಬದಲಾಯಿಸಿಕೊಂಡೆವು. ಇನ್ನು ನಾವು ಪ್ರೀತಿಯಿಂದ ಹೊಸ ಜೀವನ ಆರಂಭಿಸುತ್ತಿದ್ದೇವೆ. ನಮಗೆ ಆಶೀರ್ವಾದ ಮಾಡಿ ಎಂದು ದಾನಿಶ್‌ ಗುರುವಾರ ಬರೆದುಕೊಂಡಿದ್ದಾರೆ. 

ಆನ್ಯಾ ಮತ್ತು ದಾನಿಶ್ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಆನ್ಯಾ ಮುಂಬೈನಲ್ಲಿ ನೆಲೆಸಿದ್ದು ಗ್ರಾಫಿಕ್ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ‘ಹಂಬಲ್ ಪೊಲಿಟಿಶಿಯನ್ ನೋಗರಾಜ್'‌ ಕಾಮಿಡಿ ಸಿನಿಮಾದ ಮೂಲಕ ಪ್ರಚಾರಕ್ಕೆ ಬಂದ ದಾನಿಶ್‌ಗೆ ‘ಫ್ರೆಂಚ್ ಬಿರಿಯಾನಿ‘ ಸಿನಿಮಾ ಕೂಡ ಉತ್ತಮ ಹೆಸರು ತಂದುಕೊಟ್ಟಿದೆ.  

ಸದ್ಯ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಸಿನಿಮಾ ನಡುವೆ ಐಪಿಎಲ್‌ ಕ್ರಿಕೆಟ್ ಕುರಿತ ಟಿವಿ ಹಾಗೂ ವಿಡಿಯೊ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು