ಮಂಗಳವಾರ, ಫೆಬ್ರವರಿ 18, 2020
31 °C

ಸೋತ ‘ದರ್ಬಾರ್’: ಪರಿಹಾರ ನೀಡಲು ರಜನಿಕಾಂತ್‌ಗೆ ನಿರ್ಮಾಪಕರ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಜಿನಿಕಾಂತ್ ಅಭಿನಯದ ‘ದರ್ಬಾರ್’ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ನಷ್ಟ ಅನುಭವಿಸಿದ್ದು, ವಿತರಕರು ರಜನಿಕಾಂತ್‌ ಅವರೇ ಪರಿಹಾರ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಎ.ಆರ್. ಮುರುಗದಾಸ್ ನಿರ್ದೇಶನ ಈ ಸಿನಿಮಾ ಸುಮಾರು 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದು, ಈ ವರೆಗೆ  ಕೇವಲ 250 ಕೋಟಿ ಮಾತ್ರ ಗಳಿಸಿದೆ. ಇದರಲ್ಲಿ ರಜನಿಕಾಂತ್ ಸಂಭಾವನೆ 108 ಕೋಟಿ. ಅಲ್ಲಿಗೆ ಸಿನಿಮಾ ಸೋತಿದೆ ಎನ್ನಲಾಗಿದೆ.

ಸಿನಿಮಾವನ್ನು  ಬಿಡುಗಡೆ ಮಾಡಿದ್ದ ಹಾಗೂ ಖರೀದಿ ಮಾಡಿದ್ದ ವಿತರಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದು,  ಹಾಕಿದ್ದ ಬಂಡವಾಳ ಕೂಡ ಬಂದಿಲ್ಲ, ಆಗಿರುವ ನಷ್ಟವನ್ನು ರಜನಿಕಾಂತ್ ಅವರು ಹಿಂತಿರುಗಿಸಬೇಕು ಎಂದು ತಮಿಳು ಭಾಷೆಯ ಸಿನಿಮಾ ವಿತರಿಸಿದ್ದ ಕೆಲವು ವಿತರಕರು ಬೇಡಿಕೆಯಿಟ್ಟಿದ್ದಾರೆ.

ಈ ಹಿಂದೆ ತಮ್ಮ ಸಿನಿಮಾ ಸೋತಾಗ ತಲೈವ ವಿತರಕರ ಕೈಬಿಟ್ಟಿಲ್ಲ. ಬಾಬಾ, ಲಿಂಗಾ ಸಿನಿಮಾ ಸೋತಾಗ ಆ ಸಿನಿಮಾ ವಿತರಕರಿಗೆ ಪರಿಹಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ‘ದರ್ಬಾರ್’ ಸಿನಿಮಾ ವಿತರಕರು ರಜನಿ ಭೇಟಿಗೆ ನಿರ್ಧರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು