ಕೊರೊನಾ ಸೋಂಕಿನ ವಿರುದ್ಧ ತನ್ನ ಹೋರಾಟಕ್ಕೆ ಶುಭಹಾರೈಸುವ ಮೂಲಕ ಬೆಂಬಲವಾಗಿ ನಿಂತಿರುವ ಅಭಿಮಾನಿಗಳಿಗೆಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ಟ್ವಿಟರ್ ಮೂಲಕ ಗುರುವಾರ ಧನ್ಯವಾದಸಲ್ಲಿಸಿದ್ದಾರೆ.

’ನನ್ನ ಆರೋಗ್ಯ ಸುಧಾರಿಸುವಂತೆ ಸಾಧ್ಯವಿರುವ ಎಲ್ಲ ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಾರ್ಥಿಸಿ, ಹಾರೈಸಿದ್ದೀರಿ. ನಿಮ್ಮ ಎಲ್ಲ ಹಾರೈಕೆಯ ಸಂದೇಶಗಳನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಮತ್ತೊಮ್ಮೆ ನಿಮ್ಮಲ್ಲರಿಗೂ ಕೃತಜ್ಞತೆ. ಈ ಆಸ್ಪತ್ರೆಯಲ್ಲಿರುವ ನಿರ್ಬಂಧಗಳನ್ನು ಹೊರತುಪಡಿಸಿದರೆ, ಕೃತಜ್ಞತೆ ಸಲ್ಲಿಸಲು ಯಾವುದೇ ಮಿತಿಯಿಲ್ಲ’ ಎಂದು’ಬಿಗ್ ಬಿ’ ಪೋಸ್ಟ್ ಮಾಡಿದ್ದಾರೆ.

ಕೊರೊನಾ ಸೋಂಕಿನೊಂದಿಗೆ ಹೋರಾಟ ನಡೆಸಿರುವ ಸೀನಿಯರ್ ಬಚ್ಚನ್, ‘ದೇವರ ಪಾದಗಳಿಗೆ ಶರಣು ಹೋಗಿದ್ದೇನೆ’ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅದರೊಂದಿಗೆ ದೇವರ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಆರೋಗ್ಯದ ಎಲ್ಲ ಭಾರವನ್ನೂ ದೇವರಿಗೆ ಬಿಟ್ಟಿರುವುದಾಗಿ ಹೇಳಿದ್ದಾರೆ.

ಜುಲೈ 11 ರಂದು ಅಮಿತಾಭ್ ಬಚ್ಚನ್ ಮತ್ತು ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಜುಲೈ 12ರಂದು ಬಂದ ವರದಿಯಲ್ಲಿ ಸೊಸೆ ಬಾಲಿವುಡ್ ನಟಿ ಐಶ್ವರ್ಯ ರೈ, ಮೊಮ್ಮಗಳು ಆರಾಧ್ಯಗೂ ಸೋಂಕು ದೃಢಪಟ್ಟಿತ್ತು. ಆದರೆ, ಪತ್ನಿ ಜಯಬಾಧುರಿಯವರ ವರದಿ ’ನೆಗೆಟಿವ್’ ಆಗಿತ್ತು. ಅಮಿತಾಭ್ ಮತ್ತು ಅಭಿಷೇಕ್ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರೆ, ಐಶ್ವರ್ಯ ಮತ್ತು ಆರಾಧ್ಯ ಸಾಂಸ್ಥಿಕ ಕ್ವಾರಂಟೈನ್ (ಮನೆಯಲ್ಲೇ ಪ್ರತ್ಯೇಕ ವಾಸ) ಆಗಿದ್ದರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸ್ಥಳೀಯ ಪಾಲಿಕೆಯ ಅಧಿಕಾರಿಗಳು, ಬಚ್ಚನ್ ಅವರ ನಿವಾಸ ’ಜಲ್ಸಾ’ವನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಿದ್ದರು

ಇದೇ ಅವಧಿಯಲ್ಲಿ ಮತ್ತೊಬ್ಬ ಬಾಲಿವುಡ್ ನಟ ಅನುಪಮ್ ಖೇರ್ ಅವರ ತಾಯಿ, ಸಹೋದರನಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು. ಬಾಲಿವುಡ್ನಟಿ ರೇಖಾ ಅವರ ನಿವಾಸದ ಸೆಕ್ಯುರಿಟಿ ಗಾರ್ಡ್ಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ, ನಿವಾಸದ ಪಕ್ಕದಲ್ಲಿದ್ದ ಗಾರ್ಡ್ ಮನೆಯನ್ನು ಸೀಲ್ಡೌನ್ ಮಾಡಲಾಗಿತ್ತು.

ಸಿನಿಮಾಗಳ ಬಿಡುಗಡೆ ಮುಂದೂಡಿಕೆ

ಕೊರೊನಾ ಸೋಂಕಿನ ಭೀತಿಯಿಂದಾಗಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಬಾಲಿವುಡ್ನಲ್ಲಿ ಸ್ಟಾರ್ ನಟರು ನಟಿಸಿರುವ ಎಫ್9, ಸೂರ್ಯವಂಶಿ, ರಾಧೇಶ್ಯಾಮ್, ತಮಿಳಿನ ಬಿಗ್ಗಿ ಮಾಸ್ಟರ್ ನಂತಹ ಸಿನಿಮಾಗಳ ಬಿಡುಗಡೆ ಮುಂದೂಡಲಾಯಿತು. ಈ ನಡುವೆ ಪೊನ್ನಮಗಳ್ ವ್ಯಾಂಡಲ್, ಪೆಂಗ್ವಿನ್ ಮತ್ತು ಕನ್ನಡದ ’ಲಾ’ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದರೆ.

ಲಾಕ್ಡೌನ್ ಆರಂಭವಾಗುವ ಮುನ್ನ ಅಮಿತಾಭ್ ನಟಿಸಿದ ಕೊನೆಯ ಚಿತ್ರ ಸೂಜಿತ್ ಸರ್ಕಾರ್ ಅವರ ’ಗುಲಾಬೊ ಸಿತಾಬೊ’ ಕೂಡ ಅಮೆಜಾನ್ ಪ್ರೈಮ್ ವಿಡಿಯೊ ವೇದಿಕೆಯಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಬಿಗ್ ಬಿ ಜತೆಗೆ ಆಯುಷ್ಮಾನ್ ಖುರಾನಾ ನಟಿಸಿದ್ದಾರೆ.

ಇನ್ಸ್ಟಾಗ್ರಾಂ ಲಿಂಕ್

ಟ್ವಿಟರ್ ಲಿಂಕ್:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.