ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗೆಯ ವಿಶೇಷ ಪಾತ್ರ!

Last Updated 9 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನಂದಳಿಕೆ ನಿತ್ಯಾನಂದ ಪ್ರಭು ಅವರು ಹೊಸ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಅವರು ನಿರ್ದೇಶಿಸಿರುವ ಮೊದಲ ಸಿನಿಮಾ ಕೂಡ ಹೌದು. ಈ ಚಿತ್ರಕ್ಕೆ ಅವರು ‘5 ಅಡಿ, 7 ಅಂಗುಲ’ ಎಂಬ ಶೀರ್ಷಿಕೆ ನೀಡಿದ್ದಾರೆ.

ಇದು ಒಂದು ಮರ್ಡರ್ ಮಿಸ್ಟರಿ ಕಥೆ ಎನ್ನುವುದು ಪ್ರಭು ಅವರ ಹೇಳಿಕೆ. ‘ಕಥೆ ಬರೆಯುವಾಗ ನಮ್ಮಲ್ಲಿ ಒಂದು ಆಲೋಚನೆ ‌ಇತ್ತು. ಈ ಚಿತ್ರದಲ್ಲಿ ತಂತ್ರ, ಯುಕ್ತಿ ಹಾಗೂ ಚೇಷ್ಟೆ ಇವೆ. ಕುಚೇಷ್ಟೆ. ಕುಯುಕ್ತಿ ಮತ್ತು ಕುತಂತ್ರ ಕೂಡ ಇವೆ. ಕು ಅಂದರೆ ನಕಾರಾತ್ಮಕ. ಕು ಮತ್ತು ನಮ್ಮ ಅಂತರಾತ್ಮಕ್ಕೂ ನಡುವೆ ಇರುವ ಅಂತರ ಐದು ಅಡಿ ಏಳು ಅಂಗುಲ. ಹಾಗಾಗಿ ಚಿತ್ರಕ್ಕೆ ಈ ಹೆಸರು ನೀಡಿದ್ದೇನೆ’ ಎಂದು ತಮ್ಮ ಸಿನಿಮಾ ಶೀರ್ಷಿಕೆಯ ಹಿನ್ನೆಲೆ ಕುರಿತು ಹೇಳಿದರು.

ಚಿತ್ರದ ಪ್ರಮುಖ ಪಾತ್ರಧಾರಿಗಳಾದ ರಾಸಿಕ್, ಅದಿತಿ ಮತ್ತು ಭುವನ್ ಅವರನ್ನು ಆಡಿಷನ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ನಲವತ್ತು ದಿನಗಳಲ್ಲಿ ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಒಂದು ವಿಶೇಷ ಪಾತ್ರವಿದ್ದು, ಕಾಗೆ ಆ ಪಾತ್ರವನ್ನು ನಿಭಾಯಿಸಿದೆ!

ಒಂದು ಗಂಟೆ 53 ನಿಮಿಷಗಳ ಈ ಸಿನಿಮಾದಲ್ಲಿ ಅನಗತ್ಯ ಪಾತ್ರಗಳು ಇಲ್ಲವಂತೆ. ‘ನಾನೂ ಅನಿವಾರ್ಯವಾಗಿ ಇದರಲ್ಲಿ ಒಂದು ಪಾತ್ರ ಮಾಡಿದ್ದೇನೆ’ ಎನ್ನುತ್ತಾರೆ ನಿತ್ಯಾನಂದ ಪ್ರಭು.

ಚಿತ್ರದ ವಿಶೇಷ ಪಾತ್ರವಾದ ಕಾಗೆಯ ದೃಶ್ಯಗಳನ್ನು ಕೆಂಪಣ್ಣ ಅವರು ಒಂದು ವಾರದ ಅವಧಿಯಲ್ಲಿ ಚಿತ್ರೀಕರಿಸಿದ್ದಾರಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT