ಬೆಂಗಳೂರು:ಸಲ್ಮಾನ್ ಖಾನ್ ಮತ್ತು ಸುದೀಪ್ ಅಭಿನಯದ ‘ದಬಾಂಗ್ 3’ ಚಿತ್ರದ ಕನ್ನಡ ಅವತರಣಿಕೆಯು ನಾಲ್ಕು ದಿನಗಳಲ್ಲಿ ಒಟ್ಟು ಮೂರು ಕೋಟಿ ರೂಪಾಯಿ ಗಳಿಸಿದೆ!

ವೀಕ್ಷಕರಿಂದ ಪಡೆದ ಹಣಕ್ಕೆ ಪಾವತಿಸಬೇಕಿರುವ ತೆರಿಗೆ ಮೊತ್ತವನ್ನು ಕಡಿತ ಮಾಡಿದ ನಂತರ, ದಬಾಂಗ್ 3 ಚಿತ್ರದ ಕನ್ನಡ ಅವತರಣಿಕೆಯ ಗಳಿಕೆ ಒಟ್ಟು ₹ 2.72 ಕೋಟಿ! ಕನ್ನಡಕ್ಕೆ ಡಬ್ ಆಗಿದ್ದ, ಸುದೀಪ್ ಅಭಿನಯದ ಇನ್ನೊಂದು ಸಿನಿಮಾ ‘ಸೈರಾ ನರಸಿಂಹರೆಡ್ಡಿ’ ಚಿತ್ರದ ಗಳಿಕೆಯನ್ನು ಇದು ಮೀರಿಸುವ ಲಕ್ಷಣಗಳು ಈಗಾಗಲೇ ಗೋಚರಿಸಿವೆ.

ದಬಾಂಗ್ 3 ಚಿತ್ರದ ಕನ್ನಡ ಅವತಾರಕ್ಕೆ ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಕಲಬುರ್ಗಿ ಕಡೆ ಒಳ್ಳೆಯ ಸ್ಪಂದನ ದೊರೆತಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ ಎಂದು ಸಿನಿಮಾ ತಂಡದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.