ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಂಡುಪಾಳ್ಯಂ 4’ರಲ್ಲಿ ಸ್ಟೆಪ್ಪು ಹಾಕಿದ ಮುಮೈತ್

Last Updated 18 ನವೆಂಬರ್ 2018, 19:30 IST
ಅಕ್ಷರ ಗಾತ್ರ

ವೆಂಕಟ್ ಮೂವೀಸ್ ಲಾಂಛನದಡಿ ನಿರ್ಮಾಣಗೊಂಡಿರುವ ‘ದಂಡುಪಾಳ್ಯಂ 4’ ಚಿತ್ರದ ಐಟಂ ಸಾಂಗ್ ಬಿಡುಗಡೆಯಾಗಿದ್ದು, ನಟಿ ಮುಮೈತ್ ಖಾನ್ ಮಾದಕವಾಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಮುಮೈತ್‌ ಅವರ ಹೆಜ್ಜೆಗೆ ತಕ್ಕುದಾಗಿಸಂಗೀತ ಮತ್ತು ಸಾಹಿತ್ಯವಿರುವ ಈ ಹಾಡು ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸುವಂತೆಯೂ ಮೂಡಿ ಬಂದಿದೆ. ಕನ್ನಡ ಸೇರಿದಂತೆತೆಲುಗು, ತಮಿಳು ಮತ್ತು ಮಲೆಯಾಳದಲ್ಲಿ ಈ ಹಾಡಿನ ಲಿರಿಕಲ್ ವಿಡಿಯೊ ಬಿಡುಗಡೆ ಮಾಡಲಾಗಿದೆ. ಪರಭಾಷೆಗಳಲ್ಲಿಯೂ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.

‘ಸ್ಟೆಪ್ಪು ಹೊಡಿ ಸ್ಟೆಪ್ಪು ಹೊಡಿ ಟಪ್ಪಾಂಗುಚ್ಚಿ ಸ್ಟೆಪ್ಪು ಹೊಡಿ’ ಐಟಂ ಸಾಂಗ್‌ ಅನ್ನು ಮಾದಕವಾಗಿಯೇ ಅಣಿಗೊಳಿಸಿರುವ ಚಿತ್ರತಂಡ, ಪ್ರೇಕ್ಷಕರ ಮನಗೆಲ್ಲಲು ಸ್ಯಾಂಡಲ್‌ವುಡ್‌ಗೆ ಮುಮೈತ್‌ರನ್ನೇ ಕರೆತಂದಿದೆ.

ಚಿತ್ರದ ನಿರ್ಮಾಪಕರೇ ಆದ ವೆಂಕಟ್ ಈ ಹಾಡನ್ನು ಬರೆದಿದ್ದಾರೆ.ಆನಂದ್ ರಾಜ್ ವಿಕ್ರಂ ಸಂಗೀತ ನೀಡಿದ್ದಾರೆ. ಕೆ.ಟಿ.ನಾಯಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ದಂಡುಪಾಳ್ಯ’ ಹೆಸರಿನಲ್ಲಿ ಈ ಹಿಂದೆ ಮೂರು ಸಿನಿಮಾಗಳು ತೆರೆಕಂಡಿದ್ದು, ಅವುಗಳ ಮುಂದುವರೆದ ಭಾಗ ‘ದಂಡುಪಾಳ್ಯ 4’.

ಹಿಂದೆ ತೆರೆಕಂಡ ದಂಡುಪಾಳ್ಯ ಸರಣಿ ಸಿನಿಮಾಗಳಲ್ಲಿ ನಟಿಸಿದ್ದ ತಾರಾಗಣ ಸೇರಿದಂತೆ ಬಹುತೇಕರನ್ನು ಈ ಸಿನಿಮಾದಲ್ಲಿ ಬದಲಾಯಿಸಲಾಗಿದೆ. ಈ ಸಿನಿಮಾದ ಮುಖ್ಯ ಆಕರ್ಷಣೆ ಸುಮನ್ ರಂಗನಾಥ್. ಯಾವುದೇ ಇಮೇಜಿನ ಹಂಗಿಲ್ಲದೇ ವಿಭಿನ್ನವಾದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ಕನ್ನಡ ಚಿತ್ರಗಳನ್ನು ಪರಭಾಷಾ ನೆಲದಲ್ಲಿಯೂ ಮಿಂಚುವಂತೆ ಮಾಡಬೇಕೆಂಬ ಕನಸು ಹೊಂದಿರುವವರು ನಿರ್ಮಾಪಕ ವೆಂಕಟ್. ಅದಕ್ಕಾಗಿಯೇ ಬೇರೆ ಭಾಷೆಗಳಲ್ಲಿಯೂ ಇವುಗಳನ್ನು ತೆರೆಗೆ ತರುತ್ತಿದ್ದಾರೆ.

ಈ ಚಿತ್ರಕ್ಕೆ ಆರ್.ಗಿರಿ ಕ್ಯಾಮರಾ ನಿರ್ವಹಣೆ ಇದ್ದು, ಬಾಬು ಎ. ಶ್ರೀವತ್ಸ ಹಾಗೂ ಪ್ರೀತಿ ಮೋಹನ್ ಅವರ ಸಂಕಲನವಿದೆ. ಸುಮನ್ ರಂಗನಾಥ್ ಜೊತೆ ಮುಮೈತ್ ಖಾನ್, ಬ್ಯಾನರ್ಜಿ, ರಾಕ್ ಲೈನ್ ಸುಧಾಕರ್, ಸಂಜೀವ್ ಕುಮಾರ್, ಅರುಣ್ ಬಚ್ಚನ್, ಬುಲೆಟ್ ಸೋಮು, ವಿಠ್ಠಲ್ ರಂಗಾಯಣ, ಜೀವಾ ಸೈಮನ್, ರಿಚ್ಚಾ ಶಾಸ್ತ್ರಿ, ಸ್ನೇಹಾ ಅಭಿನಯಿಸಿದ್ದಾರೆ. ವೆಂಕಟ್ ಅವರು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT