‘ಯಜಮಾನ’ನ ಎರಡನೇ ಹಾಡು ಬಿಡುಗಡೆ

7

‘ಯಜಮಾನ’ನ ಎರಡನೇ ಹಾಡು ಬಿಡುಗಡೆ

Published:
Updated:

‘‍ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ನಟನೆಯ ‘ಯಜಮಾನ’ ಚಿತ್ರ ಚಂದನವನದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದ ‘ಶಿವನಂದಿ...' ಹಾಡಿಗೆ ದರ್ಶನ್ ಅಭಿಮಾನಿಗಳು ಫಿದಾ ಆಗಿದ್ದರು. ಈ ಸಾಂಗ್‌ ಸತತ ಮೂರು ದಿನಗಳ ಕಾಲ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು. 

ಈ ಹಾಡಿಗೆ ಸಿಕ್ಕಿದ ಅದ್ಭುತ ಯಶಸ್ಸಿನ ನಂತರ ಎರಡನೇ ಹಾಡು ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ‘ಒಂದು ಮುಂಜಾನೆ...’ ಹಾಡು ಮೆಲೋಡಿಯಾಗಿದೆ. 

‘ಶಿವನಂದಿ ಹಾಡಿಗೆ ನೀವು ತೋರಿಸಿರುವ ಪ್ರೀತಿಗೆ ನಾ ಆಭಾರಿಯಾಗಿದ್ದೇನೆ. ಈಗ ಯಜಮಾನ ಚಿತ್ರದ 2ನೇ ಹಾಡು- ‘ಒಂದು ಮುಂಜಾನೆ’ ಮೆಲೋಡಿ ನಿಮಗಾಗಿ. ಕೇಳಿ ನಿಮ್ಮ ಅನಿಸಿಕೆ ತಿಳಿಸಲು ಮರೆಯದಿರಿ’ ಎಂದು ದರ್ಶನ್‌ ಟ್ವೀಟ್‌ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !