ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

D BOSS ಅಭಿಮಾನಿಗಳಿಗೆ ಗಿಫ್ಟ್‌: ದರ್ಶನ್‌ ಹುಟ್ಟುಹಬ್ಬಕ್ಕೆ 'ರಾಬರ್ಟ್‌' ಟೀಸರ್‌

Last Updated 12 ಫೆಬ್ರುವರಿ 2020, 7:51 IST
ಅಕ್ಷರ ಗಾತ್ರ

ಬೆಂಗಳೂರು:ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಹುಟ್ಟುಹಬ್ಬದಂದು‘ರಾಬರ್ಟ್‌’ ಚಿತ್ರ ತಂಡ ಟೀಸರ್‌ ಬಿಡುಗಡೆ ಮಾಡುವ ಮೂಲಕ ದಚ್ಚು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ನೀಡಲಿದೆ.

‘ರಾಬರ್ಟ್‌’ ದರ್ಶನ್‌ ನಟನೆಯ 53ನೇ ಚಿತ್ರ. ಇದಕ್ಕೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದೇ 16ರ ಮಧ್ಯರಾತ್ರಿ 12 ಗಂಟೆಗೆ ಟೀಸರ್‌ ಬಿಡುಗಡೆ ಮಾಡಲಾಗುವುದು ಎಂದುತರುಣ್‌ ಸುದೀರ್‌ ಟ್ವೀಟ್‌ ಮಾಡಿದ್ದಾರೆ. ಇದನ್ನು ದರ್ಶನ್‌ ಕೂಡ ರಿಟ್ವೀಟ್‌ ಮಾಡಿದ್ದಾರೆ.

ಈಗಾಗಲೇ ‘ರಾಬರ್ಟ್’ ಸಿನಿಮಾದ ಪೋಸ್ಟರ್‌ಗಳು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದವು. ಪೋಸ್ಟರ್‌ ಮತ್ತು ಫಸ್ಟ್‌ಲುಕ್‌ಗೆ ದರ್ಶನ್‌ ಅಭಿಮಾನಿಗಳು ಫಿದಾ ಆಗಿದ್ದರು. ಈಗಾಗಲೇ ರಾಬಟ್‌ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ಭದ್ರಾವತಿ ಮೂಲದ ಕನ್ನಡತಿ ಆಶಾ ಭಟ್‌ನಾಯಕಿಯಾಗಿದ್ದಾರೆ.ತೆಲುಗಿನ ಖ್ಯಾತ ಖಳನಟ ಜಗಪತಿಬಾಬು, ವಿನೋದ್‌ ಪ್ರಭಾಕರ್‌ ಬಣ್ಣ ಹಚ್ಚಿದ್ದಾರೆ. ಉಮಾಪತಿ ಶ್ರೀನಿವಾಸ್‌ ಬಂಡವಾಳ ಹೂಡಿದ್ದು,ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿ ಜನ್ಮ ದಿನ ಆಚರಿಸಿಕೊಳ್ಳಲು ದರ್ಶನ ನಿರ್ಧರಿಸಿದ್ದಾರೆ. ಅದೇ ರೀತಿ ಅಭಿಮಾನಿಗಳು ಕೂಡ ಸರಳವಾಗಿ ಹುಟ್ಟು ಹಬ್ಬ ಆಚರಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT