ಅಭಿಮಾನಿಗಳ ಕೋಪ ಶಮನಕ್ಕೆ ನಟ ದರ್ಶನ್‌ ಯತ್ನ

ಗುರುವಾರ , ಜೂಲೈ 18, 2019
28 °C

ಅಭಿಮಾನಿಗಳ ಕೋಪ ಶಮನಕ್ಕೆ ನಟ ದರ್ಶನ್‌ ಯತ್ನ

Published:
Updated:

ಬೆಂಗಳೂರು: ‘ಮುನಿರತ್ನ ಕುರುಕ್ಷೇತ್ರ’ ಬಹುತಾರಾಗಣ ಇರುವ ಚಿತ್ರ. ಜುಲೈ 7ರಂದು ಅದ್ದೂರಿಯಾಗಿ ಆಡಿಯೊ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಈ ನಡುವೆಯೇ ಕಾರ್ಯಕ್ರಮದ ಪಾಸ್‌ಗಳ ಮೇಲೆ ಸಿನಿಮಾದಲ್ಲಿ ನಟಿಸಿರುವ ಯಾವೊಬ್ಬ ತಾರೆಯರ ಫೋಟೊವನ್ನೂ ಮುದ್ರಿಸಿಲ್ಲ ಎನ್ನುವುದು ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದಕ್ಕೆ ದರ್ಶನ್‌ ಅವರೇ ಟ್ವಿಟರ್‌ನಲ್ಲಿ ಉತ್ತರಿಸಿ ಅಭಿಮಾನಿಗಳ ಕೋಪ ಶಮನಕ್ಕೆ ಮುಂದಾಗಿದ್ದಾರೆ. 

‘ಕುರುಕ್ಷೇತ್ರ ಎನ್ನುವುದು ಬಹು ತಾರಾಗಣದ ಚಿತ್ರ. ಎಲ್ಲರನ್ನು ಸಮಾನಕಾರವಾಗಿ ಕಾಣಬೇಕೆಂಬ ಸದುದ್ದೇಶದಿಂದ ಯಾವ ತಾರೆಯ ಫೋಟೊಗಳನ್ನು ಪಾಸ್‌ಗಳ ಮೇಲೆ ಪ್ರಿಂಟ್ ಮಾಡಿಲ್ಲ. ಇಂತಹ ಚಿಕ್ಕ ವಿಷಯಗಳಿಗೆಲ್ಲ ಬೇಸರ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನು ಒದಗಿಸಲಾಗಿದೆ. ಆರಾಮಾಗಿ ಆಡಿಯೊ ಬಿಡುಗಡೆಯಲ್ಲಿ ಪಾಲ್ಗೊಳ್ಳಿ’ ಎಂದು ದರ್ಶನ್‌ ಅವರು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

Post Comments (+)