ಭಾನುವಾರ, ಆಗಸ್ಟ್ 18, 2019
21 °C

ಮದುವೆ ಸೀರೆಯಲ್ಲಿ ದೀಪಿಕಾ

Published:
Updated:
Deccan Herald

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಅವರ ಮದುವೆ ಬಾಲಿವುಡ್‌ ಹಿಂದೆಂದೂ ಕಾಣದಷ್ಟು ವಿಜೃಂಭಣೆಯಿಂದ ನಡೆಯಲಿದೆ ಎಂಬುದು ಸದ್ಯ ದೊಡ್ಡ ಚರ್ಚೆಯ ಸಂಗತಿ. ದೀಪಿಕಾಗೆ ಮದುಮಗಳ ವಸ್ತ್ರವಿನ್ಯಾಸ ಮಾಡುವ ಅವಕಾಶ ಯಾವ ವಿನ್ಯಾಸಕರಿಗೆ ಸಿಗುತ್ತದೆ ಎಂಬುದೂ ಚರ್ಚೆಯ ಭಾಗವೇ.

ಅಂತರರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಇತ್ತೀಚೆಗೆ ಹೊರತಂದ ಮದುಮಗಳ ವಸ್ತ್ರ ಸಂಗ್ರಹದ ಸೀರೆಯೊಂದನ್ನು ದೀಪಿಕಾ ಉಟ್ಟಿದ್ದರು. ಕಲಾತ್ಮಕ ಹಿನ್ನೆಲೆಯ ಚೌಕಟ್ಟಿನಲ್ಲಿ ದೀಪಿಕಾ ಅಪ್ಪಟ ಮದುಮಗಳಂತೆ ಕಾಣುತ್ತಿದ್ದರು. ಸಬ್ಯಸಾಚಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದೀಪಿಕಾ ಫೋಟೊವನ್ನು ಹಂಚಿಕೊಂಡಿದ್ದು 80 ಲಕ್ಷಕ್ಕೂ ಅಧಿಕ ಮಂದಿ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ, ದೀಪಿಕಾಗೆ ಮದುವೆ ಉಡುಗೆ ತೊಡುಗೆಗಳನ್ನು ಸಬ್ಯಸಾಚಿ ಅವರೇ ವಿನ್ಯಾಸ ಮಾಡಲಿ ಎಂದು ಪುಕ್ಕಟೆ ಸಲಹೆಯನ್ನೂ ಕೆಲವರು ನೀಡಿದ್ದಾರೆ. ‘ಇದು ಮದುವೆಯ ದಿನಕ್ಕೆ ರಿಹರ್ಸಲ್‌ ನಡೆಸಿರುವುದೇ?’ ಎಂದೂ ಕೇಳಿದ್ದಾರೆ.

ಅಂದ ಹಾಗೆ, ದೀಪಿಕಾ– ರಣವೀರ್‌ ಅವರು ಉತ್ತರ ಭಾರತ ಮತ್ತು ದಕ್ಷಿಣ ಭಾರತ ಪ್ರಕಾರದಲ್ಲಿ ಪ್ರತ್ಯೇಕವಾಗಿ ಮದುವೆಯಾಗಲಿದ್ದಾರೆ ಎಂಬ ಗಾಸಿಪ್‌ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಯಾವುದೂ ಮದುವೆ ಮನೆಯ ಅಧಿಕೃತ ಸುದ್ದಿಗಳಲ್ಲ. ಈ ಗಾಸಿಪ್‌ಗಳ ಮಧ್ಯೆ ದೀಪಿಕಾ, ಮದುಮಗಳ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳ ಕಣ್ಮನ ತಣಿಸಿದೆ.

Post Comments (+)