ಮುಂಬೈ: ಅಮೆರಿಕದ ಡಾಲರ್ ಎದುರು ರೂಪಾಯಿ 78 ಪೈಸೆ ಕುಸಿಯುವ ಮೂಲಕ ಸರ್ವಕಾಲಿಕ ಕುಸಿತ ದಾಖಲಿಸಿದೆ.

ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಜಾಗತಿಕ ರಾಜಕೀಯ ಸಂಘರ್ಷಗಳಿಂದಾಗಿ ಪ್ರತಿ ಡಾಲರ್ಗೆ ಬುಧವಾರ ₹92.27 ರಷ್ಟು ದಾಖಲಾಯಿತು.

ಇರಾನ್ ಯುದ್ಧದಿಂದಾಗಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್ಗೆ 82 ಅಮೆರಿಕನ್ ಡಾಲರ್ನಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ತೀವ್ರ ಒತ್ತಡಕ್ಕೆ ಸಿಲುಕಿದೆ.

ಬುಧವಾರ ಬೆಳಿಗ್ಗೆ ಡಾಲರ್ ಎದುರು ರೂಪಾಯಿ ಮೌಲ್ಯವು 92.05ರಷ್ಟಿತ್ತು. ನಂತರ ಅದು 92.18ಕ್ಕೆ ಕುಸಿಯಿತು. ಮಧ್ಯಾಹ್ನದ ಹೊತ್ತಿಗೆ ಅದು 92.27ಕ್ಕೆ ತಲುಪಿತು ಎಂದು ಪಿಟಿಐ ವರದಿ ಮಾಡಿದೆ.

ಜಗತ್ತಿನ 5ನೇ ಅತಿ ಹೆಚ್ಚು ತೈಲ ಸಾಗಣೆ ನಡೆಯುವ ಹೊರ್ಮಜ್ ಜಲಸಂಧಿ ಮೇಲೆ ಇರಾನ್ ಹಿಡಿತ ಹೊಂದಿರುವುದರಿಂದ ಕಚ್ಚಾ ತೈಲ ಹೊತ್ತ ಹಡಗುಗಳು ಕೆಲ ದಿನಗಳ ಕಾಲ ಇಲ್ಲೇ ನಿಲ್ಲಬೇಕಾದ ಸ್ಥಿತಿ ಇದೆ. ಹೀಗಾಗಿ ಜಾಗತಿಕ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ ಡಾಲರ್ ಏರಿಕೆ ಕಂಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ದುಬಾರಿ ಆಯ್ತು ಆಮದು

ಭಾರತವು ಶೇ 80ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಸದ್ಯದ ಜಾಗತಿಕ ಬೆಳವಣಿಗೆಯು ದೇಶದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ರೂಪಾಯಿ ದುರ್ಬಲವಾಗಿರುವುದರಿಂದ ಆಮದು ದುಬಾರಿಯಾಗಲಿದೆ. ಹಣದುಬ್ಬರ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.

ಒಂದು ಲೆಕ್ಕದ ಪ್ರಕಾರ ಪ್ರತಿ ಬ್ಯಾರಲ್ ಕಚ್ಚಾತೈಲದ ಬೆಲೆ ಒಂದು ಡಾಲರ್ ಹೆಚ್ಚಳವಾದರೆ, ವಾರ್ಷಿಕ ಆಮದು ವೆಚ್ಚವು ₹1.5 ಶತಕೋಟಿಯಿಂದ ₹2 ಶತಕೋಟಿವರೆಗೂ ಹೆಚ್ಚಳವಾಗಲಿದೆ. ಹೀಗಾಗಿ ಇದು ಜಿಡಿಪಿ ಮೇಲೆ ಶೇ 1.3ರಷ್ಟು ಬೀಳಲಿದೆ. 2025–26ರ ಮೂರನೇ ತ್ರೈಮಾಸಿಕದಲ್ಲಿ ಇದು ಶೇ 1.1ರಷ್ಟಿತ್ತು ಎಂದು ಆರ್ಬಿಐ ದಾಖಲೆಗಳು ಹೇಳುತ್ತವೆ.

ಇಂಧನ ಮೇಲೆ ಅವಲಂಬಿತವಾಗಿರುವ ನಾಗರಿಕ ವಿಮಾನಯಾನ, ಸರಕು ಸಾಗಣೆ, ಪೇಂಟ್ ಮತ್ತು ರಾಸಾಯನಿಕ ತಯಾರಿಕಾ ಉದ್ಯಮದಲ್ಲಿ ವೆಚ್ಚ ಹೆಚ್ಚಾಗಲಿದೆ. ಇದು ಚಿಲ್ಲರೆ ಮಾರಾಟದ ಮೇಲೂ ಪರಿಣಾಮ ಬೀರಲಿದೆ ಎಂದೆನ್ನಲಾಗಿದೆ.

ಲಾಭದ ನಿರೀಕ್ಷೆಯಲ್ಲಿ ರಫ್ತು ಉದ್ಯಮಗಳು

ಮತ್ತೊಂದೆಡೆ ರಫ್ತುದಾರರ ಲಾಭ ಹೆಚ್ಚಳವಾಗಲಿದೆ ಎಂದೂ ಅಂದಾಜಿಸಲಾಗಿದೆ. ಡಾಲರ್ನಲ್ಲಿ ಗಳಿಕೆ ಕಾಣುವ ಕಂಪನಿಗಳು ಸದ್ಯ ಸಂತಸದಲ್ಲಿವೆ. ಹೀಗಾಗಿ ಪ್ರತಿಯೊಂದು ಡಾಲರ್ ಹೆಚ್ಚಳವೂ ಅಧಿಕ ಲಾಭವನ್ನು ಅವರಿಗೆ ತಂದುಕೊಡುತ್ತಿದೆ.

ಅದರಲ್ಲೂ, ಭಾರತದ ಐಟಿ, ಔಷಧ ತಯಾರಿಕೆ ಮತ್ತು ರಫ್ತುದಾರರಿಗೆ ಡಾಲರ್ ಮೌಲ್ಯ ಹೆಚ್ಚಳ ಲಾಭದಾಯಕವಾಗಿದೆ. ದೀರ್ಘಕಾಲಿಕ ಜಾಗತಿಕ ಗುತ್ತಿಗೆ ಹೊಂದಿರುವ ಕಂಪನಿಗಳಿಗೆ ನಿರಂತರವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯದಿಂದ ಹೆಚ್ಚಿನ ಲಾಭವಾಗಿದೆ ಎಂದು ತಜ್ಞರು ಹೇಳುತ್ತಾರೆ.

ತೈಲ ಬೆಲೆ ಹೀಗೇ ಮುಂದುವರಿದರೆ ಹಣದುಬ್ಬರವನ್ನು ಆರ್ಬಿಐ ಮರು ಹೊಂದಾಣಿಕೆ ಮಾಡುವ ಸಾಧ್ಯತೆ ಇದೆ ಎಂದೆನ್ನಲಾಗಿದೆ. ಚಿಲ್ಲರೆ ಹಣದುಬ್ಬರವನ್ನು ಶೇ 2.1ರಿಂದ ಶೇ2ಕ್ಕೆ ಆರ್ಬಿಐ ಇಳಿಸಿತ್ತು. ಆದರೆ ಜಾಗತಿಕ ಮಾರುಕಟ್ಟೆಯ ಸದ್ಯದ ಪರಿಸ್ಥಿತಿ ಹೀಗೇ ಮುಂದುವರಿದರೆ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಆರ್ಬಿಐ ತರುವ ಸಾಧ್ಯತೆಗಳೂ ಇವೆ ಎಂದೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.