ಭಾನುವಾರ, ಡಿಸೆಂಬರ್ 15, 2019
26 °C

ಮುಸುಕು ತೆಗೆಯೇ ಮಾಯಾಂಗನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತೂ ಇಂತೂ ಪ್ರಿಯಾಂಕಾ ಚೋಪ್ರಾ ಮದುವೆಯ ಫೋಟೊಗಳು ರಾರಾಜಿಸುವ ಹೊತ್ತಿನಲ್ಲಿ ದೀಪ್‌ವೀರ್‌ ಜೋಡಿ, ಶುಭ್ರಶ್ವೇತ ಮೂಡ್‌ನಿಂದ ಆಚೆ ಬಂದಂತಿದೆ. ಮದುವೆಯಾದಾಗಿನಿಂದ, ಮುಂಬೈನ ರಿಸೆಪ್ಶನ್‌ವರೆಗೂ ದೀಪಿಕಾ ಹಾಗೂ ರಣ್‌ವೀರ್‌ ಇಬ್ಬರೂ ಒಂದೇ ವರ್ಣಸಂಯೋಜನೆಯ ಉಡುಗೆಗಳನ್ನು ತೊಟ್ಟು, ಮೇಡ್‌ ಫಾರ್‌ ಈಚ್‌ ಅದರ್‌ ಅನ್ನುವಂತೆ ಪೋಸ್ ಕೊಟ್ಟಿದ್ದರು.

ಇಬ್ಬರದ್ದೂ ಒಂದೇ ರಾಗರಂಜಿನಿ ಎಂಬಂತೆ ನಗು ಸೂಸುತ್ತ ಕ್ಯಾಮೆರಾ ಮುಂದೆ ನಿಂತು, ಹೂನಗೆ ಚೆಲ್ಲಿದ್ದರು. ದೀಪಿಕಾಳ ಕಂಗಳಲ್ಲಿ ರಣವೀರ್‌ ನನ್ನವನು ಎಂಬ ಹೆಮ್ಮೆ ತುಳುಕಿದರೆ, ಈ ಕನ್ನಡತಿಯಿನ್ನು ನನ್ನವಳು ಎಂಬ ಭಾವ ರಣವೀರ್‌ ಕಂಗಳಲ್ಲಿ  ಎದ್ದು ಕಾಣಿಸುತ್ತಿತ್ತು.

ಇದೀಗ ತೀರ ವಿಭಿನ್ನವಾಗಿ ಕಡುಕೆಂಪು ಬಣ್ಣದ ಉದ್ದನೆಯ ನಿಲುವಂಗಿ ತೊಟ್ಟಿರುವ ದೀಪಿಕಾ, ಕೆಂಪು ಮುಸುಕಿನಲ್ಲಿಯೇ ಇದ್ದರೆ, ಕಡುಕಪ್ಪು ಸೂಟ್‌ನಲ್ಲಿ ರಣವೀರ್‌ ಫೋಟೊಶೂಟ್‌ಗಾಗಿಯೇ ಗಾಂಭೀರ್ಯ ಹೊದ್ದು ಕುಳಿತಂತೆ ಕುಳಿತಿದ್ದಾರೆ. ಇನ್ನೊಂದು ಚಿತ್ರದಲ್ಲಿ ತಮ್ಮ ನೀಳ ಪಾದ ದರ್ಶನ ಮಾಡಿಸುವಂತೆ ದೀಪಿಕಾ, ತಮ್ಮ ಸಂಗಾತಿಯನ್ನು ಬಳಸಿ, ನಿಂತಿರುವ ಚಿತ್ರವಿದೆ.

ಹದಿನೈದು ಸಾವಿರದಷ್ಟು ರಿಟ್ವಿಟ್‌ ಆಗಿದ್ದರೆ ಅಭಿಮಾನಿಗಳು ಕಮೆಂಟಿಸುತ್ತಲೇ ಇದ್ದಾರೆ. ಈ ಹಾಟ್‌ ಲುಕ್‌ ಮದುವೆಯ ಫೋಟೊಗಳಿಗಿಂತ ಹೆಚ್ಚು ಜನಪ್ರಿಯವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು