ಅಮುಲ್ ಜಾಹೀರಾತಿನಲ್ಲಿ ಐಶ್ವರ್ಯಾ, ದೀಪಿಕಾ!

ಬುಧವಾರ, ಜೂನ್ 26, 2019
22 °C
ಅಮುಲ್ ಬೇಬಿಯಾಗಿ ದೀಪಿಕಾ, ಐಶ್ವರ್ಯಾ !

ಅಮುಲ್ ಜಾಹೀರಾತಿನಲ್ಲಿ ಐಶ್ವರ್ಯಾ, ದೀಪಿಕಾ!

Published:
Updated:

ಕಾನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ವರ್ಷವೂ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ನೆರೆದವರ ಕೇಂದ್ರ ಬಿಂದುವಾದರು. ನಿತ್ಯವೂ ಒಂದಿಲ್ಲೊಂದು ವಿನೂತನ ಉಡುಗೆಗಳಲ್ಲಿ ಗಮನ ಸೆಳೆದ ದೀಪಿಕಾ ಗಿಳಿ ಹಸಿರು ಬಣ್ಣದ ಉಡುಪಿನಲ್ಲಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು.

ಉದ್ದನೆಯ ಹಸಿರು ಬಣ್ಣದ ಉಡುಪಿನಲ್ಲಿ ಮಿಂಚಿದ್ದ ದೀಪಿಕಾ, ಅಮುಲ್ ಡೈರಿ ಬ್ರ್ಯಾಂಡ್‌ಗೂ ಜಾಹೀರಾತಿನ ವಿಷಯವಾಗಿದ್ದು ಹೊಸ ಸುದ್ದಿ. ಪ್ರಚಲಿತ ಸಮಸ್ಯೆಗಳು ಮತ್ತು ಸುದ್ದಿಗಳನ್ನೇ ವಿಷಯವಾಗಿಟ್ಟುಕೊಂಡು ತನ್ನ ಉತ್ಪನ್ನಗಳ ಜಾಹೀರಾತು ರೂಪಿಸುವ ಅಮುಲ್. ದೀಪಿಕಾಳಂತೆಯೇ ಹಸಿರು ಉಡುಪು ತೊಟ್ಟ ಮುದ್ದು ಅಮುಲ್ ಹುಡುಗಿಯ ಚಿತ್ರ ರೂಪಿಸಿದೆ. ಐಶ್ವರ್ಯಾ ರೈ ಧರಿಸಿದ್ದ ಬಂಗಾರದ ಬಣ್ಣದ ಉಡುಪು ತೊಟ್ಟ ಮತ್ತೊಬ್ಬ ಮುದ್ದುಮುಖದ ಅಮುಲ್ ಬೇಬಿಯೂ ಚಿತ್ರದಲ್ಲಿರುವುದು ವಿಶೇಷ. 

ಐಶ್ವರ್ಯಾ ರೈ ಮತ್ತು ದೀಪಿಕಾ ಪಡುಕೋಣೆ ಹೀಗೆ ಇಬ್ಬರು ನಟಿಯರ ವೇಷ ತೊಟ್ಟ ಅಮುಲ್ ಬೇಬಿಗಳು ನೋಡಲು ಮುದ್ದು ಮುದ್ದಾಗಿವೆ. ಕೈಯಲ್ಲಿ ಅಮುಲ್ ಚೀಸ್ ಇಟ್ಟುಕೊಂಡು ಪೋಸ್ ನೀಡಿರುವ ಈ ಬೇಬಿಗಳ ಚಿತ್ರಗಳ ಮೇಲೆ ‘ಗೋರಿ ತೇರಾ ಗೌನ್ ಬಡಾ ನ್ಯಾರಾ’ ಎಂಬ ಒಕ್ಕಣೆಯೂ ಇದೆ.

ಈ ಜಾಹೀರಾತನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ದೀಪಿಕಾ, ‘ನಿಜಕ್ಕೂ ಇದು ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಮತ್ತೊಂದು ಅರ್ಥದಲ್ಲಿ ಹೇಳಬೇಕೆಂದರೆ ಬ್ರೆಡ್ ಮೇಲೆ ಬೆಣ್ಣೆ ಬಿದ್ದಂತೆ!’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಣವೀರ್ ಸಿಂಗ್ ‘ಅಕ್ಷರಶಃ ಇದು ನಿಜಕ್ಕೂ ಬ್ರೆಡ್ ಮೇಲೆ ಬೆಣ್ಣೆ ಬಿದ್ಧಂತೆ’ ಎಂದಿದ್ದಾರೆ. 

ದೀಪಿಕಾ ಬಸುರಿಯೇ?

ಹಸಿರು ಬಣ್ಣದ ಉಡುಗೆಯಲ್ಲಿ, ತಲೆಗೆ ಗುಲಾಬಿ ಬಣ್ಣದ ಹೆಡ್ ಬ್ಯಾಂಡ್ ಕಟ್ಟಿಕೊಂಡಿದ್ದ ದೀಪಿಕಾಳ ಚಿತ್ರವನ್ನು ತುಸು ಮಾರ್ಪಡಿಸಿ, ಚಿಕ್ಕ ಹುಡುಗಿಯ ಮುಖದ ರೀತಿಯಲ್ಲಿರುವ ಚಿತ್ರವನ್ನು ರಣವೀರ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ‘ಏನಾದರೂ ವಿಶೇಷ ಸುದ್ದಿ ಇದೆಯೇ’ ಎಂದು ಕೇಳಿದ್ದಾರೆ. ರಣವೀರ್ ಅವರ ಪೋಸ್ಟ್‌ ನೋಡಿದವರು ದೀಪಿಕಾ ನಿಜಕ್ಕೂ ಬಸುರಿ ಇರಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. 

ಅಭಿಮಾನಿಯೊಬ್ಬರಂತೂ ರಣವೀರ್‌ಸಿಂಗ್‌ಗೆ ‘ಅಭಿನಂದನೆಗಳು ಸರ್. ಈ ಒಂಬತ್ತು ತಿಂಗಳು ‘ನಮ್ಮ ದೀಪಿಕಾ’ಳನ್ನು ಚೆನ್ನಾಗಿ ನೋಡಿಕೊಳ್ಳಿ’ ಅಂತಲೂ ಪ್ರತಿಕ್ರಿಯಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !