ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವದಂತಿಗಳ ಕುರಿತು ಮೌನಮುರಿದ ದೀಪಿಕಾ

Last Updated 13 ಅಕ್ಟೋಬರ್ 2022, 5:53 IST
ಅಕ್ಷರ ಗಾತ್ರ

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಾಂಪತ್ಯದ ಬಗೆಗಿನ ವದಂತಿಗಳ ಕುರಿತು ದೀಪಿಕಾ ಕೊನೆಗೂ ಮೌನ ಮುರಿದಿದ್ದಾರೆ. ತಾನು ಪತಿಯೊಂದಿಗೆ ಸಂತಸದಿಂದ ಇರುವುದಾಗಿ ಹೇಳಿಕೊಂಡಿದ್ದಾರೆ.

ನನ್ನ ಪತಿ ಒಂದು ವಾರದಿಂದ ಸಂಗೀತೋತ್ಸವದಲ್ಲಿದ್ದರು. ಮರಳಿ ಮನೆಗೆ ಬಂದು ನನ್ನ ಮುಖ ನೋಡಿ ಸಂತಸಗೊಂಡಿದ್ದಾರೆ ಎಂದು ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಣವೀರ್‌ ಹಾಗೂ ದೀಪಿಕಾ ಇಬ್ಬರೂ ಅವರ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಹೀಗಾಗಿ ಇಬ್ಬರಿಗೂ ಒಟ್ಟಿಗಿರಲು ಸಮಯ ಸಿಗುತ್ತಿಲ್ಲ ಎಂದು ದೀಪಿಕಾ ಈ ಹಿಂದೆ ಹೇಳಿದ್ದರು. ದೀಪಿಕಾ ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಭಾಗವಹಿಸಿದ್ದರು. ರಣವೀರ್‌ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಬುಧಾಬಿಯಲ್ಲಿದ್ದರು.

5 ವರ್ಷಗಳ ಕಾಲ ಪ್ರೀತಿಯ ಬಲೆಯಲ್ಲಿದ್ದ ದೀಪಿಕಾ ಹಾಗೂ ರಣವೀರ್‌ 2018ರಲ್ಲಿ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ಅವರ ದಾಂಪತ್ಯದಲ್ಲಿ ಬಿರುಕು ಎಂಬ ರೀತಿ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗಿತ್ತು. ಉಮರ್‌ ಸಂಧು ಎಂಬ ಬಾಲಿವುಡ್‌ ಸಿನಿಮಾ ವಿಮರ್ಶಕರೊಬ್ಬರು ಈ ಬಗ್ಗೆ ಟ್ವೀಟ್‌ ಮಾಡಿದ್ದು ದೀಪಿಕಾ–ರಣವೀರ್‌ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಆದರೆ ಈ ವಿವಾದಕ್ಕೆ ದಿಪೀಕಾ–ರಣವೀರ್‌ ಇಬ್ಬರೂ ಪ್ರತಿಕ್ರಿಯಿಸಲು ಹೋಗಿರಲಿಲ್ಲ. ಬದಲಿಗೆ ಇಬ್ಬರೂ ಚೆನ್ನಾಗಿದ್ದೇವೆ ಎಂಬ ರೀತಿಯಲ್ಲಿ ಪರೋಕ್ಷವಾಗಿ ತಮ್ಮ ಇನ್‌ಸ್ಟಾಗ್ರಾಂಗಳಲ್ಲಿ ಪೋಸ್ಟ್‌ ಮಾಡಿಕೊಂಡಿದ್ದರು.

ರಣವೀರ್‌, ರೋಹಿತ್‌ ಶೆಟ್ಟಿ ಅವರ ಸರ್ಕಸ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಶಾರೂಕ್‌ ಹಾಗೂ ಹೃತಿಕ್‌ ರೋಷನ್‌ ಜೊತೆಗಿನ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT