ಗುರುವಾರ , ಜೂನ್ 17, 2021
22 °C

ಸಿಂಧಿ ವಧುವಾದ ದೀಪಿಕಾ ಪಡುಕೋಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬುಧವಾರವಷ್ಟೇ ಕೊಂಕಣಿ ಸಂಪ್ರದಾಯದಂತೆ ವಿವಾಹ ವಿಧಿ ಪೂರೈಸಿದ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಗುರುವಾರ ಸಿಂಧಿ ಶೈಲಿಯ ಮದುಮಕ್ಕಳಾಗಿ ಮಿಂಚಿದರು. ಗುರುವಾರ ನಡೆದ ಸಮಾರಂಭದಲ್ಲಿ ದೀಪಿಕಾ ಕೊರಳಿಗೆ ಮಂಗಲಸೂತ್ರ ಧಾರಣೆಯಾಗಿದೆ ಎಂದು ಹೇಳಲಾಗಿದೆ.

ಮದುವೆಗೆ ಸಂಬಂಧಿಸಿದ ಎಲ್ಲಾ ಶಾಸ್ತ್ರಗಳನ್ನು ಅತ್ಯಂತ ಬಿಗಿ ಭದ್ರತೆಯಲ್ಲಿ ನಡೆಸಲಾಯಿತು. ಇಬ್ಬರೂ ಬಾಲಿವುಡ್‌ನ ಅಗ್ರ ನಟರಾದರೂ ಬಿ ಟೌನ್‌ನ ಮಂದಿಯನ್ನೂ ಮದುವೆಯಿಂದ ದೂರವಿಡಲಾಗಿದೆ. ಯಾರ ಕೈಯಲ್ಲೂ ಮೊಬೈಲ್‌ ಫೋನ್‌ ಇಲ್ಲ. ಹೇಗಾದರೂ ಫೋಟೊ ಮತ್ತು ವಿಡಿಯೊ ಕ್ಲಿಕ್ಕಿಸಿ ಎಲ್ಲರಿಂದ ಸೈ ಅನ್ನಿಸಿಕೊಳ್ಳಬೇಕು ಎಂದು ಸರೋವರದಲ್ಲಿ ದೋಣಿಯಲ್ಲಿ ಅಡ್ಡಾಡುತ್ತಿದ್ದ ಅನಧಿಕೃತ ಕ್ಯಾಮೆರಾಮನ್‌ಗಳನ್ನು ಭದ್ರತಾ ಸಿಬ್ಬಂದಿಯ ದೋಣಿಗಳು ಬೆನ್ನಟ್ಟಿ ಹೊರಹಾಕಿದ ಘಟನೆಯೂ ನಡೆದಿದೆ. ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಎಲ್ಲೆಲ್ಲೂ ಈ ಜೋಡಿಯ ಮದುವೆಯದ್ದೇ ಗಾಳಿಸುದ್ದಿಗಳು ಮತ್ತು ಕಟ್ಟುಕತೆಗಳು ಹರಿದಾಡುತ್ತಿವೆ. ‘ಮದುವೆಯ ಈ ಕ್ಷಣದ ಮಾಹಿತಿ’ ಎಂಬ ಒಕ್ಕಣೆಗಳಿರುವ ವಿಡಿಯೊಗಳ ಮಹಾಪೂರವೇ ಸಿಗುತ್ತಿವೆ. ಆದರೆ ವಿಡಿಯೊಗಳಲ್ಲಿ ಇರುವುದು ದೀಪಿಕಾ– ರಣವೀರ್‌ ಜೋಡಿಯ ಹಳೆಯ ದೃಶ್ಯಾವಳಿಗಳು! 

ಆದರೆ ಮದುವೆ ನಡೆಯುತ್ತಿರುವ, ಡೆಲ್‌ ಬಾಲ್‌ಬಿಯಾನೆಲ್ಲೊ ರೆಸಾರ್ಟ್‌ ಪ್ರದೇಶದ್ದೇ ಎಂಬುದು ಸ್ಪಷ್ಟವಾಗಿದೆ. ಬಿಳಿ ಬಣ್ಣದ ಛತ್ರಿಯಡಿ, ಬೆನ್ನು ಹಾಕಿ ನಿಂತಿರುವ ಈ ದಂಪತಿಯ ಫೋಟೊ ಅದು. ಕೆನೆ ಬಣ್ಣದ ಲಾಂಗ್‌ ಗೌನ್‌ ಧರಿಸಿರುವ ದೀಪಿಕಾ ತುರುಬಿನ ಸುತ್ತ ಮಲ್ಲಿಗೆ ಹೂವು ಮುಡಿದಿದ್ದು ಮುತ್ತಿನ ಆಭರಣಗಳನ್ನು ಧರಿಸಿದ್ದರು. ಮದುಮಕ್ಕಳು ಬೆನ್ನು ಹಾಕಿ ನಿಂತಿದ್ದರೆ, ದೀಪಿಕಾ ತಂದೆ ತಾಯಿ ಪ್ರಕಾಶ್‌ ಪಡುಕೊಣೆ ಮತ್ತು ಉಜ್ಜಲಾ ಪಡುಕೋಣೆ ಹಾಗೂ ಕೆಲವು ಬಂಧುಗಳನ್ನು ವಿಡಿಯೊದಲ್ಲಿ ಕಾಣಬಹುದಾಗಿತ್ತು.


ವಿವಾಹ ಸಂಭ್ರಮದ ಚಿತ್ರಗಳನ್ನು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್‌ ಟ್ವಿಟ್‌ ಮಾಡಿದ್ದಾರೆ.

ಇಟಲಿಯ ಕೋಮೊ ಸರೋವರ ಸದಾ ಪ್ರವಾಸಿಗಳಿಂದ, ಅದರಲ್ಲೂ ನವಜೋಡಿಗಳಿಂದ ಗಿಜಿಗುಡುತ್ತಿರುವ ತಾಣ. ಆದರೆ ದೀಪಿಕಾ–ರಣವೀರ್‌ ಮದುವೆಯ ಹಿನ್ನೆಲೆಯಲ್ಲಿ ಅಲ್ಲಿ ಈಗ ಮದುವೆ ಮನೆಯ ಸದಸ್ಯರು ಮತ್ತು ಭದ್ರತಾ ಸಿಬ್ಬಂದಿ ಮಾತ್ರ ಕಾಣುತ್ತಿದ್ದಾರೆ. 

ಬಾಲಿವುಡ್‌ ಮಂದಿಯೂ ದಂಪತಿಯ ಮದುವೆ ಸುದ್ದಿ ತಿಳಿಯಲು ಕಾತುರರಾಗಿದ್ದಾರೆ. ಬುಧವಾರ ಸಂಜೆ ಎರಡನೇ ಹಂತದ ಶಾಸ್ತ್ರಗಳು ಮುಗಿಯುತ್ತಿದ್ದಂತೆ ನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್‌ ಟ್ವಿಟರ್‌ನಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದರು. ದೀಪಿಕಾ–ರಣವೀರ್‌ ಸಿಂಗ್‌ ಹಸೆಮಣೆ ಏರಿದ್ದನ್ನು ಅವರೇ ಅಧಿಕೃತವಾಗಿ ಪ್ರಕಟಿಸಿದಂತಿತ್ತು. ಅದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಸುರಿಮಳೆಯೇ ಸುರಿಯುತ್ತಿದೆ.

ವಿವಾಹ ಸಂಭ್ರಮದ ಚಿತ್ರಗಳನ್ನು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್‌ ಟ್ವಿಟ್‌ ಮಾಡಿದ್ದಾರೆ.

ಅಂತೂ ಇಂತೂ, ವರ್ಷಗಟ್ಟಲೆ ಚರ್ಚೆ ಮತ್ತು ನಿರೀಕ್ಷೆಗೆ ಕಾರಣವಾಗಿದ್ದ ದೀಪಿಕಾ– ರಣವೀರ್‌ ಮದುವೆ ನಡೆದಿದೆ. ಆದರೆ ಅಲ್ಲಿನ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಅವಕಾಶಕ್ಕಾಗಿ ಜಗತ್ತಿನೆಲ್ಲೆಡೆ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ತಮ್ಮ ಅಭಿಮಾನಿಗಳು ಮತ್ತು ಆಪ್ತರನ್ನು ಇನ್ನೂ ನಿರಾಶೆಗೊಳಿಸಬಾರದು ಎಂದು ನವದಂಪತಿ ಆಯ್ದ ಫೋಟೊ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಅಸ್ಥಿಪಂಜರದ ಚಿತ್ರ ಹಾಕಿದ ಸ್ಮೃತಿ ಇರಾನಿ!

 
 
 
 

 
 
 
 
 
 
 
 
 

#when you have waited for #deepveer #wedding #pics for too longgggg 🤦‍♀️

A post shared by Smriti Irani (@smritiiraniofficial) on

ದೀಪಿಕಾ ‍ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಮದುವೆಯ ಸುದ್ದಿ, ಫೋಟೊ ಮತ್ತು ವಿಡಿಯೊಗಳನ್ನು ನೋಡಲು ಯಾರೆಲ್ಲಾ ಕಾತುರರಾಗಿದ್ದಾರೆ ಗೊತ್ತಾ? ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಂತೂ ತಮ್ಮ ಹಪಹಪಿಯನ್ನು ಇನ್‌ಸ್ಟಾಗ್ರಾಂ ಹಂಚಿಕೊಂಡಿರುವ ರೀತಿ ನೋಡಿದರೆ ಬಿದ್ದು ಬಿದ್ದು ನಗುವಂತಾಗುತ್ತದೆ.

ಸ್ಮೃತಿ ಇರಾನಿ ಅವರು ತಮ್ಮ smritiiraniofficial ಟ್ವಿಟರ್‌ ಖಾತೆಯಲ್ಲಿ, ಬೈಹುಲ್ಲಿನ ರಾಶಿಯ ಪಕ್ಕದಲ್ಲೇ ಮರದ ಬೆಂಚಿನಲ್ಲಿ ಕುಳಿತ ಭಂಗಿಯಲ್ಲಿರುವ ಅಸ್ಥಿಪಂಜರವೊಂದರ ಚಿತ್ರವೊಂದನ್ನು ಹಾಕಿ  ‘ದೀಪ್‌ವೀರ್‌ ಮದುವೆ ಫೋಟೊಗಳಿಗೆ ಕಾದು ಕಾದು ನೀವು ಹೀಗಾಗುತ್ತೀರಿ’ ಎಂದು ಬರೆದಿದ್ದಾರೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು