ಗುರುವಾರ , ಫೆಬ್ರವರಿ 20, 2020
27 °C

ಖ್ಯಾತ ವಸ್ತ್ರವಿನ್ಯಾಸಕ ವೆಂಡೆಲ್‌ ರಾಡ್ರಿಕ್ಸ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ: ಮಾಡೆಲಿಂಗ್‌ ಲೋಕದ ದಿಗ್ಗಜ ಎಂದೇ ಖ್ಯಾತರಾಗಿದ್ದ ವಸ್ತ್ರವಿನ್ಯಾಸಕ ವೆಂಡೆಲ್‌ ರಾಡ್ರಿಕ್ಸ್‌ ಉತ್ತರ ಗೋವಾದಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.

ಅವರಿಗೆ 59 ವರ್ಷ ವಯಸ್ಸಾಗಿತ್ತು. ವೆಂಡೆಲ್‌ ರಾಡ್ರಿಕ್ಸ್‌ ನಿಧನಕ್ಕೆ ಬಾಲಿವುಡ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರ ಗಾಡ್‌ಫಾದರ್‌ ಎಂದೇ ವೆಂಡೆಲ್‌ ರಾಡ್ರಿಕ್ಸ್‌ ಖ್ಯಾತರಾಗಿದ್ದರು. ಬಾಲಿವುಡ್‌ ಸಿನಿಮಾಗಳಿಗೂ ವಸ್ತ್ರವಿನ್ಯಾಸ ಮಾಡಿದ್ದರು. ವಿದೇಶಗಳಲ್ಲೂ ಹಲವು ಪ್ಯಾಶನ್‌ ಶೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಇವರ ಸೇವೆಗೆ ಭಾರತ ಸರ್ಕಾರ 2014ರಲ್ಲಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಿತ್ತು.

ಸ್ವಂತ ಮಾಡೆಲಿಂಗ್‌ ಕಂಪೆನಿಯನ್ನು ಹೊಂದಿದ್ದರು. ಪ್ಯಾಶನ್‌ ಲೋಕಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಬರೆದಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಹಲವು ಹೋರಾಟಗಳನ್ನು ನಡೆಸಿದ್ದರು.

ಬಾಲಿವುಡ್‌ನ ಅನುಷ್ಕಾ ಶರ್ಮಾ, ಮಲೈಕಾ ಆರೋರ, ಪೂಜಾ ಬೇಡಿ, ನಿರ್ದೇಶಕ ಮಧುರ್‌ ಭಂಡಾರ್ಕರ್‌, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು