ಬೆಂಗಳೂರು: ಆರ್‌ಆರ್‌ಆರ್ ನಂತರ ಜೂನಿಯರ್ ಎನ್‌ಟಿಆರ್ ಅವರ ಬಹುನಿರೀಕ್ಷಿತ ‘ದೇವರ‘ ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ ಭರ್ಜರಿ ಗಳಿಕೆ ಮಾಡಿದೆ.
ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ವಿಭಿನ್ನವಾದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ನಿರ್ಮಾಪಕರು ಹೇಳಿಕೊಂಡಿರುವ ಪ್ರಕಾರ ದೇವರ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಜಾಗತಿಕವಾಗಿ ₹172 ಕೋಟಿ ಆಗಿದೆಯಂತೆ. ಈ ಕುರಿತು ದೇವರ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಭಾರತದಲ್ಲಿ ಒಂದೇ ದಿನದಲ್ಲಿ ₹82 ಕೋಟಿ ಮೀರಿದೆ ಎಂದು ವರದಿಗಳು ಹೇಳಿವೆ.
ತೆಲುಗು ಹಾಗೂ ಹಿಂದಿಯಲ್ಲಿ ಚಿತ್ರಕ್ಕೆ ಹೆಚ್ಚು ಪ್ರತಿಕ್ರಿಯೆ ಸಿಕ್ಕಿದೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಾಯಕಿಯಾಗಿ ಅಭಿನಯಿಸಿರುವುದರಿಂದ ಹಿಂದಿ ಭಾಷಿಕರನ್ನು ಈ ಚಿತ್ರ ಸಳೆದಿದೆ. ಉಳಿದಂತೆ ಕನ್ನಡ, ತಮಿಳು, ಮಲಯಾಳಂನಲ್ಲಿ ಹೆಚ್ಚಿನ ಸದ್ದು ಮಾಡಿಲ್ಲ.