ಧನುಷ್ ಕಾಲಿವುಡ್‌ನ ಬ್ಯುಸಿ ನಟರಲ್ಲಿ ಒಬ್ಬರು. ಭಿನ್ನ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಇವರ ಕೈಯಲ್ಲೀಗ ಸಿನಿಮಾಗಳ ಸಾಲೇ ಇದೆ. ಇತ್ತೀಚೆಗೆ ಅವರು ಕಾರ್ತಿಕ್ ನರೇನ್ ನಿರ್ದೇಶನದ ಡಿ43 ಸಿನಿಮಾದ ಶೂಟಿಂಗ್ ಮುಗಿಸಿದ್ದರು. ಹಾಲಿವುಡ್‌ನ ಸಿನಿಮಾದಲ್ಲೂ ನಟಿಸುತ್ತಿರುವ ಧನುಷ್ ಸದ್ಯ ಶೂಟಿಂಗ್‌ಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಹಾಲಿವುಡ್‌ನ ‘ದಿ ಗ್ರೇ ಮ್ಯಾನ್’ ಎಂಬ ಸಿನಿಮಾದಲ್ಲಿ ಧನುಷ್ ನಟಿಸುತ್ತಿದ್ದು ಅದರ ಶೂಟಿಂಗ್ ಇಂದಿನಿಂದ ಆರಂಭವಾಗಿದೆ.

ಕೆಲ ತಿಂಗಳುಗಳ ಹಿಂದೆ ಅಂಥೋನಿ ಹಾಗೂ ಜಾಯ್ ರುಸ್ಸೋ ಅವರ ಗ್ರೇ ಮ್ಯಾನ್ ಸಿನಿಮಾದಲ್ಲಿ ತಾವು ನಟಿಸುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು ಈ ನಟ. ಕ್ರಿಸ್ ಈವನ್ಸ್, ರೈನ್ ಗಾಸ್ಲಿಂಗ್, ವೇಗ್ನರ್ ಮೌರಾ ಹಾಗೂ ಜುಲಿಯಾ ಬಟರ್ಸ್ ಮುಂತಾದ ಹಾಲಿವುಡ್ ಖ್ಯಾತರ ಜೊತೆ ಧನುಷ್ ತೆರೆ ಹಂಚಿಕೊಳ್ಳುತ್ತಿರುವ ಕಾರಣ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಇಂದು ಚಿತ್ರತಂಡ ಶೂಟಿಂಗ್ ಆರಂಭಿಸಿದೆ.

ಇದು ಮಾರ್ಕ್ ಗ್ರೇನಿ ಅವರ ಕಾದಂಬರಿ ಆಧರಿತ ಚಿತ್ರವಾಗಿದೆ. ಗ್ರೇನಿ ಇತ್ತೀಚೆಗೆ ಚಿತ್ರದಲ್ಲಿನ ಧನುಷ್ ಪಾತ್ರದ ಬಗ್ಗೆ ತಿಳಿಸಿದ್ದರು. ‘ಈ ಚಿತ್ರದಲ್ಲಿ ಭಾರತೀಯ ನಟ ಧನುಷ್ ಅವರನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಖುಷಿ ನೀಡಿದೆ. ನನಗೆ ಅವರ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಚಿತ್ರದಲ್ಲಿ ಅವರು ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ’ ಎಂದಿದ್ದಾರೆ.

‘ನನಗೆ ಟ್ವಿಟರ್‌ನಲ್ಲಿ 6000 ಮಂದಿ ಫಾಲೋವರ್‌ಗಳಿದ್ದಾರೆ, ಇದೇನೂ ವಿಶೇಷವಲ್ಲ. ದಿ ಗ್ರೇ ಮ್ಯಾನ್ ಚಿತ್ರದ ಭಾಗವಾಗಿರುವ ಭಾರತೀಯ ನಟ ಧನುಷ್ ಕೂಡ ನನ್ನನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ವಿಶೇಷ ಎಂದರೆ ಅವರನ್ನು ಟ್ವಿಟರ್‌ನಲ್ಲಿ 9.7 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದಾರೆ. ಅವರು ನನ್ನನ್ನು ಫಾಲೋ ಮಾಡುತ್ತಿರುವುದಕ್ಕೆ ನನಗೆ ವಾವ್ ಎನ್ನಿಸಿತ್ತು’ ಎಂದು ಖುಷಿಯಿಂದ ಹೇಳಿಕೊಂಡಿದ್ದರು ಗ್ರೇನಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.