ಮಂಗಳವಾರ, ಜನವರಿ 18, 2022
23 °C

ದಿಶಾ ಪಟಾಣಿ ಡಾನ್ಸ್‌ ಕೌಶಲ್ಯಕ್ಕೆ ತಲೆದೂಗಿದ ಅಭಿಮಾನಿಗಳು: ವಿಡಿಯೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Instagram Image

ನವದೆಹಲಿ: ನಟಿ ದಿಶಾ ಪಟಾಣಿ ಡಾನ್ಸ್‌ ಎಂದರೆ ಅಭಿಮಾನಿಗಳ ಕಣ್ಣುಗಳು ಅರಳುತ್ತವೆ. ಬಿಡುವಿನ ವೇಳೆ ಸಾಮಾಜಿಕ ತಾಣಗಳಲ್ಲಿ ವಿಭಿನ್ನ ಫೋಟೊ ಮತ್ತು ವಿಡಿಯೊಗಳನ್ನು ಸದಾ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುವುದೆಂದರೆ ದಿಶಾ ಅವರಿಗೆ ಎಲ್ಲಿಲ್ಲದ ಉತ್ಸಾಹ.

ಇದೀಗ ದಿಶಾ ಅವರು ತನ್ನ ಗೆಳತಿಯರ ಬಳಗದೊಂದಿಗೆ ಡಾನ್ಸ್‌ ಮಾಡುತ್ತಿರುವ ವಿಡಿಯೊ ಹಂಚಿಕೊಂಡಿದ್ದು, ನೆಟ್ಟಿಗರ ಹೃದಯ ಗೆದ್ದಿದ್ದಾರೆ. ನಿಕ್ಕಿ ಮಿನಾಜ್‌ ಹಾಡು 'ಹೈ ಸ್ಕೂಲ್‌'ಗೆ ದಿಶಾ ಪಟಾಣಿ ತಂಡ ಸೊಂಟ ಬಳುಕಿಸಿದೆ. 'ಸೆಟ್‌ನಲ್ಲಿ ಹುಡುಗಿಯರು' ಎಂಬ ತಲೆಬರಹದಲ್ಲಿ ಡಾನ್ಸ್‌ ವಿಡಿಯೊ ಹಂಚಿಕೊಂಡಿದ್ದಾರೆ.

ನಟ ಟೈಗರ್‌ ಶ್ರಾಫ್‌ ಅವರ ತಾಯಿ ಆಯೇಷಾ ಶ್ರಾಫ್‌ ಕಾಮೆಂಟ್‌ ಮಾಡಿದ್ದು, 'ತುಂಬ ಮುದ್ದಾಗಿದೆ' ಎಂದು ಹೃದಯ ಮತ್ತು ಸಂತೋಷದ ಎಮೋಜಿಗಳನ್ನು ಹಾಕಿದ್ದಾರೆ.

ಇತ್ತೀಚೆಗೆ ಬೀಚ್‌ನಲ್ಲಿ ಬಿಕಿನಿ ಉಡುಗೆಯಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದ ದಿಶಾ ಪಟಾಣಿ 'ಕಳೆದು ಹೋಗಿದ್ದೇನೆ' ಎಂದಿದ್ದರು. ದಿಶಾರ ಮಾದಕ ಭಂಗಿಗೆ ಅಭಿಮಾನಿಗಳೂ ಕಳೆದೇ ಹೋಗಿದ್ದರು.

ನಟ ಸಲ್ಮಾನ್‌ ಖಾನ್‌ ಅವರ 'ರಾಧೆ' ಚಿತ್ರದಲ್ಲಿ ದಿಶಾ ನಾಯಕಿಯಾಗಿ ನಟಿಸಿದ್ದರು. ಮುಂಬರುವ 'ಏಕ್‌ ವಿಲನ್‌ 2' ಚಿತ್ರದಲ್ಲಿ ದಿಶಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ತಾರಾ ಸುತಾರಿಯಾ, ಅರ್ಜುನ್‌ ಕಪೂರ್‌ ಮತ್ತು ಜಾನ್‌ ಅಬ್ರಾಹಂ ಅವರು ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು