ಭಾನುವಾರ, ಜೂನ್ 26, 2022
23 °C

ಕಪ್ಪು ಉಡುಗೆ ತೊಟ್ಟು ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೆ ಬಿಸಿ ಏರಿಸಿದ ದಿಶಾ ಪಟಾನಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನ  ಮಾದಕ ನಟಿ ದಿಶಾ ಪಟಾನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.  ಆಗಾಗ್ಗೆ ತಮ್ಮ ಕಲರ್‌ಫುಲ್ ಚಿತ್ರಗಳು, ವರ್ಕೌಟ್  ಮತ್ತು ಡ್ಯಾನ್ಸ್ ವಿಡಿಯೊಗಳ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ.

ಶುಕ್ರವಾರ ದಿಶಾ, ಕಪ್ಪು ಟ್ಯೂಬ್ ಟಾಪ್‌ನಲ್ಲಿ ಕ್ಯಾಮೆರಾದತ್ತ ಮಾದಕ ನೋಟ ಬೀರುತ್ತಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವು ಕಾಮೆಂಟ್‌ಗಳು ಬಂದಿದ್ದು, ದಿಶಾ ಬಾಯ್‌ಫ್ರೆಂಡ್ ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಶ್ರಾಫ್ ಹೃದಯದ ಎಮೊಜಿಗಳನ್ನು ಹರಿಬಿಟ್ಟಿದ್ದಾರೆ. 

ದಿಶಾ ಪಟಾನಿ ಕೊನೆಯದಾಗಿ 'ರಾಧೆ" ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಜಾನ್ ಅಬ್ರಹಾಂ, ತಾರಾ ಸುತಾರಿಯಾ ಮತ್ತು ಅರ್ಜುನ್ ಕಪೂರ್ ಅವರ ಜೊತೆ ಮೋಹಿತ್ ಸೂರಿ ನಿರ್ದೇಶನದ ಏಕ್ ವಿಲನ್–2 ಚಿತ್ರದಲ್ಲಿ ದಿಶಾ ನಟಿಸುತ್ತಿದ್ದಾರೆ. ಜುಲೈ 8, 2022ರಂದು ಚಿತ್ರ ತೆರೆಗೆ ಬರಲಿದೆ.

ಇದರ ಜೊತೆಗೆ, ಧರ್ಮ ಪ್ರೊಡಕ್ಷನ್ಸ್‌ನ ಆಕ್ಷನ್ ಡ್ರಾಮಾ ಯೋಧ ಚಿತ್ರದಲ್ಲೂ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಜೊತೆ ನಟಿಸುತ್ತಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು